ಸಂಗಬೆಟ್ಟು ಗ್ರಾಮ ಪಂಚಾಯತ್ ವಲಯ ಮಟ್ಟದ ಕಾಂಗ್ರೆಸ್ ನ ಪಂಚಾಯತ್ ಮಿಲನ ಸಿದ್ಧಕಟ್ಟೆಯಲ್ಲಿ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿ ಪಕ್ಷದ ಕಾರ್ಯಕರ್ತರು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದವರ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಸೋಲಾಯಿತು. ಮುಂದಿನ ದಿನಗಳಲ್ಲಿ ವಿರೋಧ ಪಕ್ಷದವರ ಆರೋಪಕ್ಕೆ ಪ್ರತ್ಯುತ್ತರ ನೀಡುವ ಮುಖಾಂತರ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಯಾವುದೇ ಕಾರಣಕ್ಕೂ ದೃತಿ ಗೆಡದೆ ಪಕ್ಷದ ಸಂಘಟನೆಯಲ್ಲಿ ಹಾಗೂ ಬಲವರ್ದನೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಮುಖಾಂತರ ಪಕ್ಷವನ್ನು ಬಲಿಷ್ಟಗೊಳಿಸುವಂತೆ ಕರೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರ್‌ರಚಿಸಿ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡುವ ಮುಖಾಂತರ ಬಲಿಷ್ಠಗೊಳ್ಳುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದರು.
ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಆದ ಸೋಲಿನ ಬಗ್ಗೆ ಪರಾಮವರ್ಶಿಸಿದರು. ಸಂಗಬೆಟ್ಟು ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ದಿನೇಶ್ ಶೆಟ್ಟಿಗಾರ್ ಅವರನ್ನು ಆಯ್ಕೆ ಮಾಡಲಾಯಿತು ಬೂತ್ ಅಧ್ಯಕ್ಷರಾದ ಹಮೀದ್ ಎಸ್.ಎ, ದೇವರಾಜ್ ಸಾಲ್ಯನ್, ನೋಣಯ್ಯ ಪೂಜಾರಿ, ಜಯಕರ್ ಶೆಟ್ಟಿ, ದಾಮೋದರ ನಾಯಕ್, ವಾಮನ್ ಬುನ್ನನ್ ಪಂಚಾಯತ್ ಸದಸ್ಯರಾದ ದೇವಪ್ಪ ಕರ್ಕೇರ, ಶೇಖರ್ ನಾಯ್ಕ, ಸುಭಾಶಿನಿ, ಶಾರದ, ಮಯ್ಯದ್ದಿ, ಹಾಗೂ ಮುಖಂಡರಾದ ಡಾ.ಪ್ರಭಾಚಂದ್ರ, ಮಂಜಯ್ಯ ಶೆಟ್ಟಿ, ದಾಮೋದರ ಮಂಚಕಲ್ಲು, ಸೀತರಾಮ್ ಶೆಟ್ಟಿ, ಬುಜಬಲಿ ಕಂಬಳಿ,ಲೋಕಯ್ಯ ಪೂಜಾರಿ, ಫಾರೂಕ್ ಕೆರೆಬಳಿ, ಶಿವಾನಂದ ರೈ, ಉಸ್ಮಾನ್, ಅಶೋಕ್ ಆಚಾರಿ, ಮೋನಾಕ ಕಲ್ಕುರಿ, ಶಶಿಕುಮಾರ್, ಅಲ್ತಾಫ್ ಅಹಮದ್, ಜಲಜ ಪೂಜಾರಿ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ದಿನೇಶ್ ಶೆಟ್ಟಿಗಾರ್ ಸ್ವಾಗತಿಸಿ ಜಯಕರ್ ಶೆಟ್ಟಿ ವಂದಿಸಿದರು.