www.bantwalnews.com Editor: Harish Mambady
ಬಿ.ಸಿ.ರೋಡಿನ ಫ್ಲೈಓವರ್ ಸಮೀಪ ಹಾದುಹೋಗುವ ಹೆದ್ದಾರಿಯಲ್ಲಿ ಕಂಡುಬಂದಿದ್ದ ದೊಡ್ಡ ಹೊಂಡ ಕಾಣಿಸದಂತೆ ತೇಪೆ ಹಚ್ಚಲಾಗಿದೆ.
Pic: Satish, Kartik Studio
ಗುರುವಾರ ಈ ಬೃಹತ್ ಹೊಂಡ ಮುಚ್ಚುವ ಕಾರ್ಯ ನಡೆಯಿತು. ಇಲ್ಲಿ ನಡೆದಾಡಲು ಅಷ್ಟೇ ಅಲ್ಲ, ವಾಹನ ಸವಾರಿಯೂ ಅಸಾಧ್ಯ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಾಗ್ಗೆ ಇದಕ್ಕೆ ತೇಪೆ ಹಾಕುವುದು, ಮತ್ತೆ ಕಿತ್ತುಹೋಗುವುದು ಅದೇ ಜಾಗದಲ್ಲಿ ಕಳೆದ ಒಂದೆರಡು ವರ್ಷಗಳಿಂದ ನಡೆಯುತ್ತಿದೆ. ಇಲ್ಲಿ ಸಮಸ್ಯೆ ಏನು, ಇದಕ್ಕೆ ಶಾಶ್ವತ ಪರಿಹಾರ ಯಾವುದು ಎಂಬುದನ್ನು ಸಂಶೋಧಿಸಬೇಕಾದ ಕಾರ್ಯವನ್ನು ಇಲಾಖೆಗಳು ಮಾಡಬೇಕಿದೆ. ಹೊಂಡದ ಕುರಿತು ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಿತ ವರದಿ ಇದು. ಕ್ಲಿಕ್ ಮಾಡಿರಿ.