ಮಂಚಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮತ್ತು ಅಖಂಡ ಭಜನಾ ಸಪ್ತಾಹ ಸಮಿತಿ ವತಿಯಿಂದ ಮಂಚಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜುಲೈ 18ರಿಂದ 23ವರೆಗೆ ಅಖಂಡ ಭಜನಾ ಸಪ್ತಾಹ ನಡೆಯಲಿದೆ.
ಈ ಪ್ರಯುಕ್ತ ಪ್ರತಿದಿನವೂ ಧಾರ್ಮಿಕ ಸಭೆ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, 16ರಂದು ಕಾರ್ಯಕ್ರಮವನ್ನು ದೀಪೋಜ್ವಲನ ಮೂಲಕ ಲಕ್ಷ್ಮೀನಾರಾಯಣ ಬಳ್ಳುಕರಾಯ ಉದ್ಘಾಟಿಸುವರು. ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡುವರು. 17ರಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ, 18ರಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, 19ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, 20ರಂದು ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯೀ, 21ರಂದು ಕಟೀಲು ಕ್ಷೇತ್ರದ ಕಮಲಾದೇವಿಪ್ರಸಾದ ಆಸ್ರಣ್ಣ, 22ರಂದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಭಾಗವಹಿಸುವರು ಎಂದು ಅಖಂಡ ಭಜನಾ ಸಪ್ತಾಹ ಸಮಿತಿ ಗೌರವಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮತ್ತು ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…