ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಾದೇಕಲ್ಲು ಎಂಬಲ್ಲಿ ಮೂರು ಕಡೆ ನಡೆಸಲಾಗುತ್ತಿದ್ದ ಕೆಂಪು ಕಲ್ಲಿನ ಕ್ವಾರಿಗಳಿಗೆ ಮಂಗಳವಾರ ದಿಢೀರ್ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಪದ್ಮಶ್ರೀ ಮತ್ತು ಸಿಬ್ಬಂದಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಲಾರಿಯಷ್ಟು ಕಲ್ಲು, ಕಡಿಯಲು ಉಪಯೋಗಿಸುವ ದೊಡ್ಡ ಮಷಿನ್ ಯಂತ್ರ, ಕಲ್ಲು ತೆಗೆಯಲು ಉಪಯೋಗಿಸುವ ಸೊತ್ತುಗಳನ್ನು ಅವರು ವಶಪಡಿಸಿಕೊಂಡಿದ್ದಾರೆ.
ಕಾನೂನು ಉಲ್ಲಂಘಿಸಿ ಈ ಕ್ವಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದ್ದು, ಭೂ ವಿಜ್ಞಾನ ಇಲಾಖೆಯ ಬಿ ಕೆ ಮೂರ್ತಿ, ವಿಟ್ಲ ಪೊಲೀಸ್ ಸಿಬ್ಬಂದಿ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಕರೋಪಾಡಿ ಗ್ರಾಮ ಲೆಕ್ಕಾಧಿಕಾರಿ ಅನಿಲ್ ಕುಮಾರ್ ಸಿಬ್ಬಂದಿ ಮೊಯಿದಿ ಕುಂಞ, ಗಿರೀಶ್, ಶಿವಪ್ರಸಾದ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.