ಯೋಗ ಅಭ್ಯಾಸಿಗಳ ಯೋಗಾಸನ ರಾಜ್ಯ ಮಟ್ಟದ ಸ್ಪರ್ಧೆಯನ್ನು ಬಿ.ಸಿ.ರೋಡ್‌ನಲ್ಲಿ ಮುಂದಿನ ಅಕ್ಟೋಬರ್ ಪ್ರಥಮ ವಾರದಲ್ಲಿ ಶಾಲಾ ಮಕ್ಕಳ ಬೇಸಿಗೆ ರಜೆಯ ಸಂದರ್ಭದ ಹಮ್ಮಿಕೊಳ್ಳಲು ಜು. 14ರಂದು ಬಿ.ಸಿ.ರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಯಿತು.
ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ರಿ. ಪ್ರಧಾನ ಕಾರ್ಯದರ್ಶಿ ಅಧ್ಯಕ್ಷ ಡಾ| ರಘುವೀರ ಅವಧಾನಿ ನೇತೃತ್ವದಲ್ಲಿ ಸಭೆ ನಡೆಯಿತು.
ಅಂತರಾಷ್ಟ್ರೀಯ ಯೋಗಪಟು ಮೋನಪ್ಪ ಪೂಜಾರಿ ಮಂಗಳೂರು ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆ ನಡೆಯಲಿದೆ.
ಸುಮಾರು ಐದು ನೂರು ಮಂದಿ ಯೋಗಾಸನ ಸ್ಪರ್ಧಿಗಳನ್ನು ನಿರೀಕ್ಷಿಸಿದ್ದು, ಅವರಿಗೆ ಎರಡು ದಿನಗಳಲ್ಲಿ ವಿವಿಧ ವಿಭಾಗವಾರು ಸ್ಪರ್ಧೆಯನ್ನು ಯೋಜಿಸಿದೆ. ಪ್ರತಿ ಸ್ಪರ್ಧೆಯಲ್ಲಿ ಪಾಲ್ಗೊಂಡದ್ದಕ್ಕೆ ಸರ್ಟಿಫಿಕೇಟ್, ವಿಜೇತರಾದವರಿಗೆ ಶಾಶ್ವತ ಫಲಕ, ಸರ್ಟಿಫಿಕೇಟ್, ನಗದು ಪುರಸ್ಕಾರ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಪೂರ್ವಬಾವಿ ಸಭೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ| ಶಿವಪ್ರಸಾದ ಶೆಟ್ಟಿ, ಕೋಶಾಧಿಕಾರಿ ಡಾ| ಸುಬ್ರಹ್ಮಣ್ಯ ಭಟ್ ಟಿ., ಪ್ರಮುಖರಾದ ರಾಜಾ ಬಂಟ್ವಾಳ , ದಾಮೋದರ ರಾಮಕುಂಜ, ರಾಮಚಂದ್ರ ಭಟ್ ಮಂಗಳೂರು, ಗೀತಾ ಕಾರಂತ, ಪ್ರತಿಮಾ, ಮಂಜುನಾಥ ಪೈ ಮತ್ತು ಇತರ ಯೋಗಾಭ್ಯಾಸಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಯನ್ನು ರಚಿಸಲು ತಿಮಾನಿಸಲಾಯಿತು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…