ಬಂಟ್ವಾಳ : ಇಲ್ಲಿನ ಅಜ್ಜಿಬೆಟ್ಟಿನಲ್ಲಿರುವ ಅಕ್ಕಮಹಾದೇವಿ ಶಿಶು ಮಂದಿರದಲ್ಲಿ ಅಜ್ಜಿಬೆಟ್ಟು, ಅಗ್ರಬೈಲು, ಸಂಚಯಗಿರಿ, ಕುಲಾಲ ಮಠ, ದೈಪಲ ಭಾಗದ ಯಕ್ಷಗಾನ ಅಭಿಮಾನಿಗಳು ಸೇರಿಕೊಂಡು ಅಕ್ಕಮಹಾದೇವಿ ಯಕ್ಷ ಕಲಾ ಕೇಂದ್ರ ರಚನೆಯಾಗಿದೆ. ಇದರ ಉದ್ಘಾಟನೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವರಾಮ್ ಜೋಗಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಕಲಾವಿದ ದಾಮೋದರ ಆಚಾರ್ಯ, ಯಕ್ಷನಾಟ್ಯ ಗುರುಗಳಾದ ದಯಾನಂದ ಪಿಲಿಕೂರು, ವಿಜಿತ್ ಕುಮಾರ್ ಶೆಟ್ಟಿ, ಪ್ರಗತಿಪರ ಕೃಷಿಕ ಮೋಹನ ಅಗ್ರಬೈಲು ಮತ್ತು ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷ ಉದಯ ಕುಮಾರ್ ಅಜ್ಜಿಬೆಟ್ಟು ಭಾಗವಹಿಸಲಿದ್ದಾರೆ. ಪ್ರತೀ ಆದಿತ್ಯವಾರ ಬೆಳಿಗ್ಗೆ ಶಿಶು ಮಂದಿರದಲ್ಲಿ ಬೆಳಿಗ್ಗೆ 8ರಿಂದ 9ರ ವರೆಗೆ ಯಕ್ಷನಾಟ್ಯ ತರಗತಿಯು ನಡೆಯಲಿದೆ ಎಂದು ಯಕ್ಷಕಲಾ ಕೇಂದ್ರದ ಕಾರ್ಯದರ್ಶಿ ಚಂದ್ರಾವತಿ ಅಜ್ಜಿಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.