ಯಕ್ಷಗಾನ

ಸೆಪ್ಟೆಂಬರ್ 14ರಂದು ಇಡೀ ರಾತ್ರಿ ಭ್ರಾಮರೀ ಯಕ್ಷವೈಭವ 2019, ಉಚಿತ ಪ್ರದರ್ಶನ

ಸೆಪ್ಟೆಂಬರ್ 14ರಂದು ಶನಿವಾರ ಸಂಜೆ 6.55ರಿಂದ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನ ದಲ್ಲಿ ಭ್ರಾಮರಿ ಯಕ್ಷವೈಭವ. ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನ, ನೇಪಥ್ಯ ಕಲಾವಿದರಿಗೆ ಸನ್ಮಾನ, ನಾ ಕಂಡಂತೆ ಕಾಳಿಂಗ ನಾವಡರು ಪುಸ್ತಕ ಬಿಡುಗಡೆ ನಡೆಯಲಿದೆ. ಪ್ರಶಸ್ತಿ ಪ್ರದಾನ, ಸನ್ಮಾನಿತರ ವಿವರ ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳಲಿದೆ., ಯಕ್ಷಗಾನ ರಾತ್ರಿ 9 ಗಂಟೆಗೆ ಸರಿಯಾಗಿ ಆರಂಭಗೊಳ್ಳಲಿದೆ. ಪ್ರದರ್ಶನ ಉಚಿತ.

ಚಿತ್ರ: ಅಶ್ವಿತ್ ಶೆಟ್ಟಿ

ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಗ್ರೂಪ್ ಭ್ರಾಮರೀ ಯಕ್ಷಮಿತ್ರರು ಜನಪ್ರಿಯವಾಗಿದೆ. ಇಲ್ಲಿನ ಸದಸ್ಯರೀಗ ತಂಡವಾಗಿ ಜೊತೆಸೇರಿ ಈ ಯಕ್ಷವೈಭವವನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲಿದ್ದಾರೆ.

ಜಾಹೀರಾತು

 ಪ್ರಸಂಗ 1:   ಚೂಡಾಮಣಿ

ಭಾಗವತಿಕೆ-  ದಿನೇಶ್ ಅಮ್ಮಣ್ಣಾಯ, ಚೆಂಡೆ ಮದ್ದಳೆ-ದೇಲಂತಮಜಲು ಸುಬ್ರಹ್ಮಣ್ಯ ಭಟ್, ವಿನಯ ಆಚಾರ್ ಕಡಬ,

ಪಾತ್ರವರ್ಗ: ಶೃಂಗಾರ ರಾವಣ-  ರಾಧಾಕೃಷ್ಣ ನಾವಡ ಮಧೂರು, ಲಂಕಿಣಿ -‌ಹರಿನಾರಾಯಣ ಭಟ್ ಎಡನೀರು, ಹನೂಮಂತ-  ಅಮ್ಮುಂಜೆ ಮೋಹನ್ ಕುಮಾರ್, ಸೀತೆ- ಶಶಿಕಾಂತ್ ಶೆಟ್ಟಿ ಕಾರ್ಕಳ, ಸರಮೆ- ವಿಶ್ವಾಸ್ ಕಾವೂರು, ತ್ರಿಜಟೆ -ಸುಕೇಶ್ ಮಡಾಮಕ್ಕಿ, ಅನುಕೂಲ ನಾರಿಯರು- ಲಕ್ಷ್ಮಣ ಮರಕಡ,, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ,ದಿನೇಶ್ ಕೋಡಪದವು, ರಾವಣ ದೂತ-  ಮವ್ವಾರ್ ಬಾಲಕೃಷ್ಣ ಮಣಿಯಾಣಿ

ಪ್ರಸಂಗ 2: ರಾಮಾಂಜನೇಯ

ದ್ವಂದ್ವ ಭಾಗವತಿಕೆ: ಭಾಗವತರು- ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಚೆಂಡೆ,ಮದ್ದಳೆ- ಗುರು ಪ್ರಸಾದ್  ಬೊಳಿಂಜಡ್ಕ,, ಚೈತನ್ಯ ಕೃಷ್ಣ ಪದ್ಯಾಣ, ಚಕ್ರತಾಳ – ರಾಜೇಂದ್ರಕೃಷ್ಣ

ಪಾತ್ರವರ್ಗ: ಶಕುಂತರಾಜ- ಜಯಾನಂದ ಸಂಪಾಜೆ, ವನಪಾಲಕರು-  ಮವ್ವಾರ್ ಬಾಲಕೃಷ್ಣ ಮಣಿಯಾಣಿ ,ಪ್ರಜ್ವಲ್ ಕುಮಾರ್ ಗುರುವಾಯನಕೆರೆ,ದಿನೇಶ್ ಕೋಡಪದವು, ರಾಮ -ವಿಶ್ವೇಶ್ವರ ಭಟ್ ಸುಣ್ಣಂಬಳ, ಸೀತೆ – ಸಂತೋಷ್ ಹಿಲಿಯಾಣ, ಹನೂಮಂತ – ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವಿಶ್ವಾಮಿತ್ರ- ಪೆರ್ಲ ಜಗನ್ನಾಥ ಶೆಟ್ಟಿ, ಅಂಜನಾದೇವಿ-  ಎಂ.ಕೆ ರಮೇಶ್ ಆಚಾರ್, ಅಂಗದ- ಶಶಿಧರ ಕುಲಾಲ್ ಕನ್ಯಾನ, ಸುಗ್ರೀವ – ವೆಂಕಟೇಶ್ ಕಲ್ಲುಗುಂಡಿ, ವಿಭೀಷಣ- ಹರಿರಾಜ ಕಿನ್ನಿಗೋಳಿ, ನಾರದ – ವಾದಿರಾಜ ಕಲ್ಲೂರಾಯ

ಪ್ರಸಂಗ 3- ದ್ರೌಪದಿ ಪ್ರತಾಪ

ದ್ವಂದ್ವ ಭಾಗವತಿಕೆ ಭಾಗವತಿಕೆ- ಪ್ರಸಾದ್ ಬಲಿಪ,ಹೊಸಮೂಲೆ ಗಣೇಶ್ ಭಟ್, ಮದ್ದಳೆ- ಗಣೇಶ್ ಭಟ್ ನೆಕ್ಕರಮೂಲೆ, ಚೆಂಡೆ- ಲಕ್ಮೀನಾರಾಯಣ ಅಡೂರು, ಮುರಾರಿ ಕಡಂಬಳಿತ್ತಾಯ, ಚಕ್ರತಾಳ- ರಾಜೇಂದ್ರಕೃಷ್ಣ

ಪಾತ್ರವರ್ಗ:  ದ್ರೌಪದಿ -1 – ಅಕ್ಷಯ್ ಮಾರ್ನಾಡ್, ದ್ರೌಪದಿ-2- ರಕ್ಷಿತ್ ಶೆಟ್ಟಿ ಪಡ್ರೆ, ಭೀಮ – ಸದಾಶಿವ ಶೆಟ್ಟಿಗಾರ್, ಅರ್ಜುನ- ಸುಬ್ರಾಯ ಹೊಳ್ಳ ಕಾಸರಗೋಡು, ಸುಭದ್ರೆ- ಮಹೇಶ್ ಸಾಣೂರು, ಹನೂಮಂತ- ಲಕ್ಷ್ಮಣ ಮರಕಡ, ಸೂರ್ಯವರ್ಮ- ಶಶಿಕಿರಣ್ ಕಾವು, ಚಂದ್ರವರ್ಮ- ಮನೀಷ್ ಪಾಟಾಳಿ, ಅಪಶಕುನ – ಬಾಲಕೃಷ್ಣ ಮವ್ವಾರ್, ನಾರದ- ವಾದಿರಾಜ ಕಲ್ಲೂರಾಯ, ಕೃಷ್ಣ- ಡಿ ಮಾಧವ ಬಂಗೇರ, ಬಲರಾಮ – ಅರಳ ಗಣೇಶ್, ಯಾದವರು- ಲೋಕೇಶ್,ರಾಜೇಶ್, ಈಶ್ವರ- ಹರಿರಾಜ್ ಕಿನ್ನಿಗೋಳಿ, ಪಾರ್ವತಿ – ವಿಶ್ವಾಸ್ ಕಾವೂರು, ಬಲಗಳು- ಚಂದ್ರಶೇಖರ ಬನಾರಿ, ಚಂದ್ರಕಾಂತ್ ಸಿಮಂತೂರು, ಕಾಳಿ-  ಮಂದಾರ್ ಮೂಡಬಿದ್ರಿ, ಚಂಡಿ – ಅಕ್ಷಯ್ ಉಲ್ಲಂಜೆ,

ವೇಷಭೂಷಣ- ಶ್ರೀ ರಾಜರಾಜೇಶ್ವರಿ ಕಲಾ ಆರ್ಟ್ಸ್ .ಪೊಳಲಿ, ಸಂಯೋಜನೆ- ಡಿ ಮಾಧವ ಬಂಗೇರ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.