ಶಂಭೂರು ಕುಂದಾಯ ಪಂಜುರ್ಲಿ ರಕ್ತೇಶ್ವರಿ ದೈವಸ್ಥಾನದ ನೂತನ ಭಂಡಾರದ ಮನೆಯ ಜೀರ್ಣೋದ್ಧಾರ ವಿಜ್ಞಾಪನಾ ಪತ್ರವನ್ನು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯುವ ಉದ್ಯಮಿ ನವೀನ ಶೆಟ್ಟಿ ಮಂಜಿಪಾಲು ಬಿಡುಗಡೆ ಮಾಡಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶ್ವಿನ್ ರಾವ್ ಉದ್ಗಾಟಿಸಿದರು. ಅಧ್ಯಕ್ಷತೆಯನ್ನು ನರಿಕೊಂಬು ಗ್ರಾ.ಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು ವಹಿಸಿದ್ದರು. ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಆನಂದ.ಎ ಶಂಭೂರು, ಗ್ರಾ.ಪಂ ಸದಸ್ಯೆ ಹೇಮಾಲತಾ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕೆ.ಪ್ರಭಾಕರ್ ರಾವ್, ಯಶೋಧ ಬಿ.ಕೆ, ಪ್ರಗತಿಪರ ಕೃಷಿಕ ಬಾಲಕೃಷ್ಣ ಹೊಳ್ಳ ಬೈಪಾಡಿ, ಕುಂದಾಯ ಪಂಜುರ್ಲಿ ರಕ್ತೇಶ್ವರಿ ಸಮಿತಿಯ ಅಧ್ಯಕ್ಷ ದಿನೇಶ್ ಆರ್ ಉಪಸ್ಥಿತರಿದ್ದರು. ಲಕ್ಷ್ಮೀ ಪ್ರಕಾಶ್ ಸ್ವಾಗತಿಸಿ ಯತೀಶ್ ಎಂ ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…