ಮಾಜಿ ಸಚಿವ ಬಿ.ರಮಾನಾಥ ರೈ ಮುಂದಾಳತ್ವದಲ್ಲಿ , ಬಂಟ್ವಾಳದ ಪ್ರೀತೇಶ್ ಸಭಾಭವನದಲ್ಲಿ ಅಮ್ಟಾಡಿ ಗ್ರಾಮ ಪಂಚಾಯತ್ ವಲಯ ಮಟ್ಟದ ಪಂಚಾಯತ್ ಮಿಲನ ಕಾರ್ಯಕ್ರಮ ಜರುಗಿತು.
ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಯಂತೆ ಕಾರ್ಯಪ್ರವರ್ತರಾಗಿ ಪಕ್ಷ ಸಂಘಟನೆ ಹಾಗೂ ಪಕ್ಷದ ಬಲವರ್ಧನೆಗೆ ಹೆಚ್ಚು ಒತ್ತು ನೀಡುವಂತೆ ಕರೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಆದ ಸೋಲಿನ ಬಗ್ಗೆ ಪರಾಮವರ್ಶಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಾತಾನಾಡಿ ಪಕ್ಷದ ಕಾರ್ಯಕರ್ತರು ಯಾವುದೇ ರೀತಿಯಲ್ಲಿ ಧೃತಿಗೆಡದೆ ಮುಂದೆ ಬರುವ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಸ್ಥಳಿಯ ಮುಖಂಡರು ಚುನಾವಣೆಯಲ್ಲಿ ರ್ಸ್ಪಸುವ ಮುಖಾಂತರ ಗ್ರಾಮ ಪಂಚಾಯತ್ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬರುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಮುಖಂಡರಾದ ಪಿಯೂಸ್ ಎಲ್ ರೋಡ್ರಿಗಸ್, ತಾಲೂಕು ಪಂಚಾಯಾತ್ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಎಫ್ರೀಮ್ ಸಿಕ್ವೇರಾ, ಜಗದೀಶ್ ಕೊಯಿಲಾ,ರತ್ನಾಕರ ಶೆಟ್ಟಿ ಕುರಿಯಾಳ, ಚಿತ್ತರಂಜನ್ ಶೆಟ್ಟಿ, ಡಾ ಶೇರಾ, ಪ್ಲೋಸಿ ಡಿಸೋಜಾ ಬೂತ್ ಸಮಿತಿ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.ವಲಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿ ಫ್ರಾನ್ಸಿಸ್ ಸಲ್ದಾನ ವಂದನಾರ್ಪಣೆಗೈದರು.
ಕಾವಳಪಡೂರಿನಲ್ಲಿ ಪಂಚಾಯತ್ ಮಿಲನ
ಕಾಂಗ್ರೆಸ್ ಪಕ್ಷದಿಂದ ಕಾವಳಪಡೂರು ಗ್ರಾಮ ಪಂಚಾಯತ್ ವಲಯ ಮಟ್ಟದ ಪಂಚಾಯತ್ ಮಿಲನ ಕಾರ್ಯಕ್ರಮ ವಗ್ಗದ ಪಚ್ಚಾಜೆ ಸಭಾ ಭವದಲ್ಲಿ ನಡೆಯಿತು. ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿ ಪಕ್ಷದ ಕಾರ್ಯಕರ್ತರು ಸೋಲನ್ನು ಸ್ಪರ್ದಾ ಮನೋsವದಿಂದ ಸ್ವೀಕರಿಸಿ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರ್‌ರಚಿಸುವ ಮುಖಾಂತರ ಹಾಗೂ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡುವ ಮುಖಾಂತರ ಬಲಿಷ್ಠಗೊಳ್ಳುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ತಾಲೂಕು ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಸಿ ಬಂಗೇರಾ, ಮುಖಂಡರಾದ ಮಾಯಿಲಪ್ಪ ಸಾಲಿಯಾನ್, ಜಗದೀಶ್ ಕೊಯಿಲಾ, ಸತೀಶ್ ಪಿಲಿಂಗಲ್, ನವೀನ್ ಶೆಟ್ಟಿ ವಾಮದಪದವು, ಡಾ| ಪ್ರವೀಣ್ ಸೇರಾ, ಅಬ್ದುಲ್ ಲತೀಫ್, ವೀರೇಂದ್ರ ಅಮೀನ್, ಸುಜಿತ್ ಜೈನ್ ಪ್ರಭಾಕರ ಅಮೀನ್ ಹಾಗೂ ಎಲ್ಲಾ ಪಂಚಾಯತ್ ಸದಸ್ಯರು, ಬೂತ್ ಸಮಿತಿ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಚಂದ್ರಶೇಖರ್ ಕರ್ಣ ಸ್ವಾಗತಿಸಿ ಮಾಣಿಕ್ಯರಾಜ್ ಜೈನ್ ವಂದಿಸಿದರು.