ವಿಶ್ವಕಪ್ ಕ್ರಿಕೆಟ್ – ಸೆಮಿಫೈನಲ್ಸ್ ಗೆ ಭಾರತದ ಎದುರಾಳಿ ನ್ಯೂಜಿಲೆಂಡ್
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಕೂಟದ ಸೆಮಿಫೈನಲ್ಸ್ ಪ್ರವೇಶಿಸಿದ ತಂಡಗಳು ಭಾರತ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್.
ಜುಲೈ 9ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಜೊತೆ ಸೆಣಸಲಿದೆ.
ಜುಲೈ 11 ಗುರುವಾರದಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಈ ಎರಡು ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಹಾಗೆಯೇ ಇಲ್ಲಿ ಗೆದ್ದ ತಂಡಗಳು ಜುಲೈ 14ರಂದು ಭಾನುವಾರಂದು ಕ್ರಿಕೆಟ್ ಕಾಶಿ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮಹಾ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.
ಭಾರತ: ಪಂದ್ಯ: 9, ಗೆಲುವು: 7, ಸೋಲು: 1, ಡ್ರಾ: 1, ಅಂಕ: 15
ಆಸ್ಟ್ರೇಲಿಯಾ: ಪಂದ್ಯ: 9, ಗೆಲುವು: 7, ಸೋಲು: 2, ಅಂಕ: 14
ಇಂಗ್ಲೆಂಡ್: ಪಂದ್ಯ: 9, ಗೆಲುವು: 6, ಸೋಲು: 3, ಅಂಕ: 12
ನ್ಯೂಜಿಲೆಂಡ್: ಪಂದ್ಯ: 9, ಗೆಲುವು: 5, ಸೋಲು: 3, ಡ್ರಾ: 1, ಅಂಕ: 11