ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಮತ್ತು ಕೆಸರುಗದ್ದೆಯ ಓಟದ ಸ್ಪರ್ಧೆ ಸಮೀಪದ ಗದ್ದೆಯಲ್ಲಿ ಶನಿವಾರ ನಡೆಯಿತು.
ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ತೆಂಗಿನ ಗರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಸಭಾ ಕಾರ್ಯಕ್ರಮ ಬಳಿಕ ಅತಿಥಿಗಳು ಗದ್ದೆಗೆ ಹಾಲು ಹಾಕುವ ಮೂಲಕ ನೇಜಿ ನೆಟ್ಟರು.
ಗದ್ದೆಯಲ್ಲಿ ನೇಜಿ ನೆಡುವ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಉದ್ಘಾಟಕರಾದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಸಿ.ಆರ್. ಕೃಷಿಯ ಬದುಕಿನೊಂದಿಗೆ ವಿದ್ಯಾಭ್ಯಾಸ ನಡೆಸುವುದು ಇಂದು ಅಗತ್ಯ ಎಂದು ಹೇಳಿದರು.
ಪ್ರಕೃತಿ ಜೊತೆ ಬೆರೆತರೆ ಆರೋಗ್ಯವಂತ ದೇಹ, ಮನಸ್ಸು ಹೊಂದಲು ಸಾಧ್ಯ ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ದಿವಾಕರ್, ಶಿಕ್ಷಕ ರಕ್ಷಕ ಸಂಘದ ಆಧ್ಯಕ್ಷ ಶ್ರೀಧರ ಬಿ, ಶಾಲಾ ಆಡಳಿತಾಧಿಕಾರಿ ಐತಪ್ಪ ಪೂಜಾರಿ, ಶಿಕ್ಷಕ ರಕ್ಷಕ ಸಂಘದ ಖಜಾಂಚಿ ಹರಿಶ್ಚಂದ್ರ ಉಪಸ್ಥಿತರಿದ್ದರು, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಸ್ವಾಗತಿಸಿದರು. ಶಿಕ್ಷಕ ಹರಿಪ್ರಸಾದ್ ವಂದಿಸಿದರು. ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.