ಬಂಟ್ವಾಳ: ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ನೂತನ ತಂಡದ ಪದಗ್ರಹಣ ಸಮಾರಂಭ ಭಾನುವಾರ ರಾತ್ರಿ ನಡೆಯಿತು.
2019-20ನೇ ಸಾಲಿನ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಕಾರ್ಯದರ್ಶಿ ಪಲ್ಲವಿ ಕಾರಂತ, ಖಜಾಂಚಿ ಕಿಶೋರ್ ಕುಮಾರ್, ಉಪಾಧ್ಯಕ್ಷರಾಗಿ ಶಾಂತರಾಜ್, ನಿಕಟಪೂರ್ವ ಅಧ್ಯಕ್ಷ ಉಮೇಶ್ ನಿರ್ಮಲ್, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಹನೀಫ್, ಇತರ ಪದಾಧಿಕಾರಿಗಳಾದ ಪದ್ಮನಾಭ ರೈ, ವಿದ್ಯಾ ಸಿ.ಶೆಟ್ಟಿ, ಸ್ಟೀವನ್ ಡಿಸೋಜ, ಆದಂ ಸಲಾಂ, ಶನ್ ಫತ್ ಶರೀಫ್, ಶಂಕರ ಶೆಟ್ಟಿ, ಸುಧಾಕರ ಸಾಲ್ಯಾನ್, ಡಾ.ಸಂತೋಷ್ ಬಾಬು ಸಹಿತ 12 ಮಂದಿ ಪದವಿ ಸ್ವೀಕರಿಸಿದರು. ಇದೇ ವೇಳೆ ಸಾಧಕ ಕೌಶಿಕ್, ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರಕಾರಿ ಹೈಸ್ಕೂಲ್ ವಿದ್ಯಾರ್ಥಿ ಜಯಗೋವಿಂದ ಅವರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಿವಿಧ ಯೋಜನೆಗಳಿಗೆ ನೆರವು ನೀಡಲಾಯಿತು. ಈ ಸಂದರ್ಭ ಪದಗ್ರಹಣ ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲೆ 3181ರ ಪೂರ್ವ ಜಿಲ್ಲಾ ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ, ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಸದಸ್ಯರು ಸೇವೆಯಲ್ಲಿ ಸಾರ್ಥಕತೆಯನ್ನು ಕಾಣುತ್ತಾರೆ. ಆತ್ಮವಿಶ್ವಾಸ ವೃದ್ಧಿಗೆ ಇದು ಪೂರಕ ಎಂದರು. 2018-19ರ ಅಸಿಸ್ಟೆಂಟ್ ಗವರ್ನರ್ ಎನ್.ಪ್ರಕಾಶ್ ಕಾರಂತ್, 2019-20ರ ಅಸಿಸ್ಟೆಂಟ್ ಗವರ್ನರ್ ರಿತೇಶ್ ಬಾಳಿಗಾ, ಝೋನಲ್ ಲೆಫ್ಟಿನೆಂಟ್ ಮಂಜುನಾಥ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭ 22 ಹೊಸ ಸದಸ್ಯರ ಸೇರ್ಪಡೆ ನಡೆಯಿತು. ನರೇಂದ್ರನಾಥ ಭಂಡಾರಿ ಮತ್ತು ಸುರೇಶ್ ನಾವೂರು ಕಾರ್ಯಕ್ರಮ ನಿರೂಪಿಸಿದರು.