ಗ್ರಾಮೀಣ ಜನರು ಸಮಸ್ಯೆಗಳನ್ನು ಹೇಳಿಕೊಳ್ಳಲು ಕಚೇರಿಗಳನ್ನು ಅಲೆದಾಡುವ ಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸಲು ಗ್ರಾಪಂನಲ್ಲೇ ಕಡತ ವಿಲೇವಾರಿ ಆಗುವಂತೆ ಮಾಡಲು ಗ್ರಾಮದ ಕಡೆ ಶಾಸಕರ ನಡಿಗೆ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಗ್ರಾಮದ ಕಡೆ ಶಾಸಕರ ನಡೆ ಕಾರ್ಯಕ್ರಮಕ್ಕೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಪಂ ಕಚೇರಿಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿದ ಅವರು, ಗ್ರಾಮದ ಬಹುತೇಕ ಸಮಸ್ಯೆಗಳನ್ನು ಹಂತಹಂತವಾಗಿ ಆಧ್ಯತೆಯ ನೆಲೆಯಲ್ಲಿ ಪರಿಹಾರ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಸರಕಾರದಿಂದ ಸೌಲ್ಯಭ್ಯಗಳಿಂದ ಜನರು ವಂಚಿತರಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ಮಂಚಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು ೯೦ ಲಕ್ಷ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ ಎಂದರು.
57 ರಸ್ತೆಗಳ ಅಭಿವೃದ್ಧಿ ಬಗ್ಗೆ ಅರ್ಜಿಗಳು ಬಂದಿವೆ. ಎಲ್ಲ ರಸ್ತೆಗಳ ಅಭಿವೃದ್ಧಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದ ಅವರು, ವಿವಿಧ ಸಮಸ್ಯೆಗಳನ್ನು ಆಲಿಸಿದರು.
20 ಲಕ್ಷ ವೆಚ್ಚದಲ್ಲಿ ಮಂಚಿ ನೂಜಿ ಕೂಟೇಲು ತಡೆಗೋಡೆ ಹಾಗೂ 30 ಲಕ್ಷ ರೂ ವೆಚ್ಚದಲ್ಲಿ ನೂಜಿ ಹಾಲಬೆ ಕಿರು ಸೇತುವೆ ನಡೆದ ಕಾಮಗಾರಿ ಯನ್ನು ಶಾಸಕರು ವೀಕ್ಷಣೆ ನಡೆಸಿದರು.
ಮಂಚಿ ಮತ್ತು ಇರಾ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ ಇದೆ, ಪ್ರಸ್ತುತ ಪ್ರಭಾರ ಇದ್ದ ಅರೋಗ್ಯ ಸಹಾಯಕಿ ಕಚೇರಿಗೆ ಬರದೆ ತೊಂದರೆಯಾಗುತ್ತಿದೆ ಎಂದು ಆಶಾ ಕಾರ್ಯಕರ್ತೆ ಯರು ಶಾಸಕರ ಗಮನಕ್ಕೆ ತಂದಾಗ ಡಿ.ಎಚ್.ಒ.ಅವರನ್ನು ಪೋನ್ ಮೂಲಕ ಸಂಪರ್ಕ ಮಾಡಿ ಆರೋಗ್ಯ ಸಹಾಯಕಿ ನೇಮಕ ಮಾಡುವಂತೆ ತಿಳಿಸಿದರು.
ಪಂಚಾಯತ್ಗೆ ಬೇಟಿ ನೀಡಿ ಗ್ರಾಮ ಪಂಚಾಯತ್ ಸದಸ್ಯರು ಪಿ.ಡಿ.ಒ.ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರಲ್ಲದೆ, ಪಂಚಾಯತ್ನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಯಾವ ರೀತಿಯ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಸಿದರು. ಕುಡಿಯುವ ನೀರಿನ ಬಗ್ಗೆ, ಕಸವಿಲೇವಾರಿ ತ್ಯಾಜ್ಯ ಸಮಸ್ಯೆ, ತೆರಿಗೆ ವಸೂಲಾತಿ , ಸ್ಮಶಾನ, ವಸತಿ ಯೋಜನೆ, 94ಸಿ , ಕಿಸಾನ್ ಸನ್ಮಾನ್, ಉದ್ಯೋಗ ಖಾತರಿ ಯೋಜನೆ, ಹೀಗೆ ಅನೇಕ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಮಸ್ಯೆಗಳಿರುವ ಕಡೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಲಾಂದೋಲನ ಬಗ್ಗೆ ಗಂಭೀರ ಚಿಂತನೆ
ಮಳೆಕೊಯ್ಲು ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ಹೇಳಿದ ರಾಜೇಶ್ ನಾಕ್, ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ತಾಲೂಕಿನಲ್ಲಿ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು. ಬೋರ್‌ವೆಲ್ ರೀಚಾರ್ಜ್ ಮಳೆ ಕೊಯ್ಲು, ಹೀಗೆ ಅನೇಕ ರೀತಿಯಲ್ಲಿ ನೀರನ್ನು ಇಂಗಿಸುವ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರದಂತೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳವ ಯೋಚನೆ ಮಾಡಿದ್ದೇವೆ ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ, ಸದಸ್ಯ ರಾದ ಕೇಶವ ರಾವ್, ಉದಯಶಂಕರ್, ಕೃಷ್ಣ ಪ್ಪ ಬಂಗೇರ, ಪುಷ್ಪಾ ಎಸ್.ಕಾಮತ್, ಕೆ.ಎಸ್. ಪ್ರತಿಮಾ, ಸುಮಾ , ಸುಮತಿ, ಮೋಹನ್ ಪ್ರಭು, ಪಿ.ಡಿ.ಒ.ಮಯಾ ಕುಮಾರಿ, ಕಾರ್ಯದರ್ಶಿ ರಮೇಶ್, ಕಂದಾಯ ನಿರೀಕ್ಷಕ ರಾಮ, ಪಂಚಾಯತ್ ರಾಜ್ ಇಂಜಿನಿಯರ್ ಪ್ರಸನ್ನ ಹಾಗೂ ಕುಶ ಕುಮಾರ್, ಸಣ್ಣ ನೀರಾವರಿ ಇಂಜಿನಿಯರ್ ಪ್ರಸನ್ನ, ಬೀಟ್ ಪೋಲೀಸ್ ಮೋಹನ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಮುಖರಾದ ರಾಮ್ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರತ್ನಕುಮಾರ್ ಚೌಟ, ಪುರುಷೋತ್ತಮ ಶೆಟ್ಟಿ, ಬಾಲಕೃಷ್ಣ ಸೇರ್ಕಳ, ಹರೀಶ್ ಬೇಡಗುಡ್ಡೆ, ರಮೇಶ್ ರಾವ್ ಮಂಚಿ, ಹ್ಯಾರೀಶ್ ಮಂಚಿ, ಮೋಹನ್ ಪಿ.ಎಸ್. ಮತ್ತಿತರರು ಉಪಸ್ಥಿತರಿದ್ದರು. ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಗ್ರಾ.ಪಂ.ಸದಸ್ಯ ಕೇಶವ ರಾವ್ ವಂದಿಸಿದರು.