ರೋಟರಿ ಕ್ಲಬ್ ಬಂಟ್ವಾಳ ಟೌನ್ ನ 2019-20 ರ ಸಾಲಿನ ನಿಯೋಜಿತ ಅಧ್ಯಕ್ಷ ಜಯರಾಜ್ ಎಸ್ .ಬಂಗೇರ ಮತ್ತು ನೂತನ ಪದಾಧಿಕಾರಿಗಳ ತಂಡದ ಪದಗ್ರಹಣ ಸಮಾರಂಭ ಜೂ.30 ರಂದು ಸಂಜೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಉಮೇಶ್ ನಿರ್ಮಲ್ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಟರಿ ಜಿಲ್ಲೆ 3181 ರ ಪೂರ್ವ ಜಿಲ್ಲಾ ಗವರ್ನರ್ ಡಾ.ಆರ್.ಎಸ್ .ನಾಗರಾಜ್ ಪದಗ್ರಹಣವನ್ನು ನೆರವೇರಿಸಲಿದ್ದು,ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್, 2019-20 ರಸಾಲಿನ ನಿಯೋಜಿತ ಸಹಾಯಕ ಗವರ್ನರ್ ರಿತೇಶ್ ಬಾಳಿಗಾ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ರೋಟೆರಿಯನ್ ಗಳಾದ ಪಲ್ಲವಿ ಕಾರಂತ ಕಾರ್ಯದರ್ಶಿ, ಶಾಂತರಾಜ್ ಉಪಾಧ್ಯಕ್ಷ, ಕಿಶೋರ್ ಕುಮಾರ್ ಖಜಾಂಚಿ, ಮಹಮ್ಮದ್ ಹನೀಫ್ ಜತೆ ಕಾರ್ಯದರ್ಶಿ, ಪದ್ಮನಾಭ ರೈ ಕ್ಲಬ್ ಸರ್ವಿಸಸ್ ಡೈರೆಕ್ಟರ್, ವಿದ್ಯಾ .ಸಿ ಸಮುದಾಯ ಸೇವೆ ಡೈರೆಕ್ಟರ್, ಸ್ಟೀವನ್ ಡಿಸೋಜ ವೃತ್ತಿಸೇವೆ ಡೈರೆಕ್ಟರ್ ಆದಮ್ ಸಲಾಂ ಅಂತರಾಷ್ಟ್ರೀಯ ಡೈರೆಕ್ಟರ್, ಶನಫತ್ ಶರೀಷ್ ಯುವ ಜನಸೇವೆ ಡೈರೆಕ್ಟರ್, ಶಂಕರ್ ಶೆಟ್ಟಿ ಟಿಆರ್ ಎಫ್ ಚೆಯರ್ ಮೆನ್, ಸುಧಾಕರ ಸಾಲ್ಯಾನ್ ಮೆಂಬರ್ ಶಿಪ್ ಚೆಯರ್ ಮೆನ್, ಡಾ.ಸಂತೋಷ್ ಪಲ್ಸ್ ಪೊಲೀಯೋ ಚೆಯರ್ ಮೆನ್ ಆಗಿ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು. ತನ್ನ ಅವಧಿಯಲ್ಲಿ ಸ್ಪೂರ್ತಿ ಜಿಲ್ಲಾ ಯೋಜನೆಯಡಿ 13 ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಜೀವನ ಸಂಧ್ಯಾ ಯೋಜನೆಯಲ್ಲಿ ವೃದ್ದಾಶ್ರಮಗಳಿಗೆ ಸವಲತ್ತುಗಳನ್ನು ನೀಡುವುದರ ಜೊತೆಗೆ ಅವರೊಂದಿಗೆ ಬೆರತು ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆಯಲ್ಲದೆ ಇನ್ನು ಕೆಲ ಜನಪರವಾದ ಸೇವೆಯನ್ನು ನೀಡಲು ಉದೇಶಿಸಲಾಗಿದೆ ಎಂದು ಅಧ್ಯಕ್ಷ ಉಮೇಶ್ ನಿರ್ಮಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಜಯರಾಜ್ ಎಸ್.ಬಂಗೇರ, ನಿಯೋಜಿತ ಕಾರ್ಯದರ್ಶಿ ಪಲ್ಲವಿ ಕಾರಂತ, ಪ್ರಮುಖರಾದ ರಿತೇಶ್ ಬಾಳಿಗಾ, ನಾರಾಯಣ ಹೆಗ್ಡೆ, ಸುರೇಶ್ ಸಾಲ್ಯಾನ್ ಉಪಸ್ಥಿತರಿದ್ದರು.