ನಮ್ಮ ಮುನಿಗಳಿಂದ ಕರಗತವಾದ ಪರಂಪರೆಯ ಯೋಗಕ್ಕೆ ಇಂದು ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬಂಟ್ವಾಳದ ನೇತ್ರಾವತಿ ನದಿ ಕಿನಾರೆಯಲ್ಲಿರುವ ಶ್ರೀ ತಿರುಮಲ ವೆಂಕಟರಣ ದೇವಸ್ಥಾನ ಕಲ್ಯಾಣ ಮಂಟಪದ ಸಭಾಂಗಣ ಹಾಗೂ ಹೊರಾಂಗಣದಲ್ಲಿ ಯೋಗಾಭ್ಯಾಸದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು
ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆಯ ಸುಮಾರು 700 ಮಂದಿ ವಿದ್ಯಾರ್ಥಿಗಳು ಎರಡು ಗಂಟೆಗಳ ಕಾಲ ನಿರಂತರ ಯೋಗಾಭ್ಯಾಸ ಮಾಡಿ ಗಮನ ಸೆಳೆದರು.
ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಪುರುಷೋತ್ತಮ ಶೆಣೈ, ಸಂಚಾಲಕ ಎ. ಗೋವಿಂದ ಪ್ರಭು, ಕೋಶಾಧಿಕಾರಿ ಪಿ. ಪ್ರವೀಣ್ ಕಿಣಿ, ಪ್ರಮುಖರಾದ ಪ್ರಕಾಶ್ ಪ್ರಭು, ವಸಂತ ಮಲ್ಯ, ಶ್ರೀನಿವಾಸ ಪೈ ಮೊದಲಾದವರು ಹಾಜರಿದ್ದರು. ಶಾಲಾ ಮುಖ್ಯೋಪಧ್ಯಾಯರಾದ ನಂದಿನಿ ಬಾಯಿ, ಚಂದ್ರಮ್ಮ, ರೋಶನಿ ತಾರಾ ಡಿಸೋಜಾ, ಕುಸಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಂಚಾಲಕ ಗೋಕುಲ್ ನಾಥ್ ಶೆಣೈ, ನಂದನೇಶ್ವರ ಉಪವಲಯ ಸಂಚಾಲಕ ನಾರಾಯಣ, ಶಿಕ್ಷಣ ಪ್ರಮುಖ ಹರೀಶ್, ಮಹಿಳಾ ಸಂಚಾಲಕಿ ಮಲ್ಲಿಕಾ, ವಿವಿಧ ಶಾಖಾ ಪ್ರಮುಖರಾದ ಶಶಿಕಲಾ, ಸುನೀಲ್, ಸತೀಶ್, ವಜ್ರಾಕ್ಷಿ, ವೇದ, ಶೋಭಾ, ಪ್ರಾಪ್ರಿ ಯೋಗ ಶಿಕ್ಷಣ ಕಲಿಸಿಕೊಟ್ಟರು. ವಿದ್ಯಾರ್ಥಿನಿಯರಾದ ಶ್ರೀ ಲಕ್ಷ್ಮಿ ಪೈ ಸ್ವಾಗತಿಸಿದರು, ಸ್ಪೂರ್ತಿ ವಂದಿಸಿದರು, ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.