ಬಂಟ್ವಾಳ: ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಜೂನ್ 21ರಂದು ಬೆಳಗಿನ ಜಾವ ದ.ಕ.ಜಿಲ್ಲಾ ಆಯುಷ್ ಇಲಾಖೆ ಸಹಭಾಗಿತ್ವದಲ್ಲಿ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ಈ ಸಂದರ್ಭ ಡಾ. ರಘುವೀರ ಅವಧಾನಿ ಮಾರ್ಗದರ್ಶನದಲ್ಲಿ ಬಿ.ಸಿ.ರೋಡ್ ಶಾಖೆ ಸದಸ್ಯರು ಯೋಗ ಪ್ರದರ್ಶನ ನೀಡಿದರು. ಪ್ರತಿಭಾ ಸುಬ್ರಹ್ಮಣ್ಯ ನರಿಕೊಂಬು ಯೋಗದ ಮಹತ್ವ ತಿಳಿಸಿದರು. ಈ ಸಂದರ್ಭ ಪ್ರತಿಷ್ಠಾನದ ಅಧ್ಯಕ್ಷ ಡಾ. ಶಿವಪ್ರಸಾದ್ ಶೆಟ್ಟಿ ಪ್ರಮುಖರಾದ ಡಾ. ಸುಬ್ರಹ್ಮಣ್ಯ ಟಿ, ಡಾ.ಅಶ್ವಿನ್ ಬಾಳಿಗಾ, ಮಂಜುನಾಥ ಪೈ ಮತ್ತಿತರರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…