ಬಂಟ್ವಾಳ

ಮೂಲರಪಟ್ನ ಕಾಮಗಾರಿ ಆರಂಭವಾಗದಿರಲು ಶಾಸಕರೇ ನೇರ ಹೊಣೆ – ಬೇಬಿ ಕುಂದರ್

ಜನತೆಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮೂಲರಪಟ್ನ ಸೇತುವೆ ಕಾಮಗಾರಿ ಇನ್ನೂ ಆರಂಭವಾಗದಿರಲು ಕ್ಷೇತ್ರದ ಶಾಸಕರೇ ನೇರ ಹೊಣೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಆರೋಪಿಸಿದ್ದಾರೆ.

ಬಹುಪ್ರದೇಶಗಳ ಜನತೆಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮೂಲರಪಟ್ನ ಸೇತುವೆ ಕಳೆದ ಮಳೆಗಾಲ ಆರಂಭದಲ್ಲಿ ಕುಸಿದು ಬಿದ್ದು ವರ್ಷ ಒಂದು ಕಳೆದರೂ ಇನ್ನೂ ಕಾಮಗಾರಿ ಆರಂಭವಾಗದಿರುವುದು ದುರಂತ. ಸಂಪರ್ಕ ಸೇತುವೆ ಇಲ್ಲದೆ ಇಕ್ಕೆಲಗಳ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ರೀತಿಯ ಕ್ರಮಕೈಗೊಳ್ಳದಿರುವುದು ಅವರ ಬೇಜವಾಬ್ಧಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಕುಂದರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ಮತ್ತು ಮಂಗಳೂರು ತಾಲೂಕು ವ್ಯಾಪ್ತಿಯ ಪ್ರದೇಶಗಳ ಜನರ ಸಂಪರ್ಕಕ್ಕೆ ಅನುಕೂಲವಾಗಿರುವ ಈ ಸೇತುವೆ ಕುಸಿದ ಬಳಿಕ ಜನಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆಯ ಮರುಜೋಡಣೆ ಇಲ್ಲವೇ ಹೊಸ ಸೇತುವೆ ನಿರ್ಮಾಣಕ್ಕೆ ಜನತೆ ಹಲವು ಬಾರಿ ಒತ್ತಡ ಹೇರಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ರೀತಿಯಲ್ಲಿ ಸ್ಪಂದಿಸದೇ ಜನತೆಯ ಬೇಡಿಕೆಯನ್ನು ಕಡೆಗಣಿಸಿದ್ದಾರೆ. ಜನತೆಯ ಮೂಲಭೂತ ಅವಶ್ಯಕತೆಯಾದ ಸಂಪರ್ಕ ವ್ಯವಸ್ಥೆಯ ಬಗ್ಗೆಯೇ ಕಿಂಚಿತ್ತೂ ಗಮನ ನೀಡದ ಶಾಸಕರ ಇಚ್ಚಾಶಕ್ತಿಯನ್ನು ಇದೀಗ ಜನರೇ ಪ್ರಶ್ನಿಸುವಂತಾಗಿದೆ ಎಂದು ಬೇಬಿ ಕುಂದರ್ ಟೀಕಿಸಿದ್ದಾರೆ.

ಈ ಹಿಂದೆ ಬಿ.ರಮಾನಾಥ ರೈ ಸಚಿವರಾಗಿದ್ದ ಸಂದರ್ಭ ಮೂಲರಪಟ್ನದಲ್ಲಿ ಮೇಲ್ಸೆತುವೆ ನಿರ್ಮಿಸಿದ್ದರಿಂದಾಗಿ ಇದೀಗ ತಾತ್ಕಾಲಿಕ ವ್ಯವಸ್ಥೆಯಾದರೂ ಇದೆ. ಬಿ.ರಮಾನಾಥ ರೈ ಅವರೇ ಶಾಸಕರಾಗಿರುತ್ತಿದ್ದರೆ ಹೊಸ ಸೇತುವೆ ಕಾಮಾಗಾರಿಯು ಒಂದೇ ವರ್ಷದಲ್ಲಿ ಪೂರ್ಣಗೊಳ್ಳುತ್ತಿತ್ತು ಎಂದು ಜನರಾಡುತ್ತಿದ್ದಾರೆ. ಜನಪರ ಕಾಳಜಿ ಮತ್ತು ಇಚ್ಚಾಶಕಿ ಇದ್ದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯ ಎನ್ನುವುದಕ್ಕೆ ಬಿ. ರಮಾನಾಥ ರೈ ಅವರು ಕ್ಷೇತ್ರದಲ್ಲಿ ನಡೆಸಿದ ಮಾದರಿ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿಯಾಗಿದೆ ಎಂದು ಕುಂದರ್ ಅಭಿಪ್ರಾಯಪಟ್ಟಿದ್ದಾರೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts