ನಿರಂತರ ಅಭ್ಯಾಸ ಮಾಡಿದರೆ ಗುರಿ ತಲುಪಲು ಸಾಧ್ಯ. ಹಿರಿಯರಿಗೆ ಗೌರವ, ಕಿರಿಯರಲ್ಲಿ ಪ್ರೀತಿ, ಸಮಾನ ವಯಸ್ಕರಲ್ಲಿ ಸ್ನೇಹಭಾವದಿಂದ ವರ್ತಿಸಿ ಎಂದು ಡಾ. ಸ್ಮಿತಾ ಮಹೇಶ್ ಹೇಳಿದರು.
ಅವರು ಬಿ.ಆರ್.ಎಂ.ಸಿ.ಪಿ. ಶಾಲೆಯಲ್ಲಿ ವಿಜ್ಞಾನ, ಐಟಿ, ಇಕೋ ಮತ್ತು ಹೆಲ್ತ್ ಕ್ಲಬ್ಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ. ಆಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಲಬ್ಗಳ ಕಾರ್ಯದರ್ಶಿ ಮತ್ತು ಜೊತೆ ಕಾರ್ಯದರ್ಶಿಗಳಿಗೆ ಬ್ಯಾಜ್ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಸ್ಮೃತಿ ಟಿ. ಶೆಟ್ಟಿ ಹಾಗೂ ಶ್ರೀಯಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಜೂಲಿ ಟಿ.ಜೆ. ಮಾರ್ಗದರ್ಶನ ನೀಡಿದರು.
“Ehsaas” – A Ghazal Concert at Mangalore (more…)