ಬಂಟ್ವಾಳ

ಮೇಲ್ಕಾರಿನಲ್ಲಿ ಗುರುಕುಲ ಕಲಾಕೇಂದ್ರದ ಶಾಖೆ ಉದ್ಘಾಟನೆ

ಜಗತ್ತಿನಲ್ಲಿ ಎಲ್ಲರನ್ನೂ ಒಗ್ಗೂಡಿಸಬಲ್ಲ ಏಕೈಕ ಭಾಷೆ ಎಂದರೆ ಸಂಗೀತ. ಇದನ್ನು ತರಬೇತುಗೊಳಿಸುವುದರಿಂದ ಪ್ರತಿಭಾವಂತರು ಹೊರಹೊಮ್ಮುತ್ತಾರೆ ಎಂದು ಗಾಯಕಿ ರೂಪಾ ಪ್ರಕಾಶ್ ಹೇಳಿದರು.

ಮೇಲ್ಕಾರಿನ ಎಚ್.ಎಂ.ಹೈಟ್ಸ್ ವಸತಿ ಸಮುಚ್ಛಯದಲ್ಲಿ ಪುತ್ತೂರಿನ ಗುರುಕುಲ ಕಲಾಕೇಂದ್ರದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು

ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಯುವಜನ ಒಕ್ಕೊಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ಗುರುಪ್ರಿಯ ಅವರು ಸಂಗೀತ ಕ್ಷೇತ್ರ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿದ್ದು ಅವರ ಜೀವನಕಾರ್ಯಯೋಜನೆಗಳಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಗುರುಕುಲ ಕಲಾಕೇಂದ್ರದ ಕಾರ್ಯದರ್ಶಿ ಶಿವಾನಂದ ಕಾಮತ್ ಮಾತನಾಡಿ ಕಲಾಕೇಂದ್ರವು ತುಳು ಜನಪದ, ಕನ್ನಡ ಜನಪದ ಕಲೆಗಳ ಉಳಿವು ಮತ್ತು ಬೆಳವಣಿಗೆಯ ನಿಟ್ಟಿನಲ್ಲಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು. ಗಾಯಕ, ಕಲಾವಿದರಾದ ಪ್ರಕಾಶ್ ಮಹಾದೇವನ್, ಗುರುಕುಲ ಕಲಾಕೇಂದ್ರದ ಗೌರವಾಧ್ಯಕ್ಷರಾದ ವಿದ್ಯಾ ನಾಯಕ್ ಉಪಸ್ಥಿತರಿದ್ದರು.

ಕಲಾಕೇಂದ್ರದ ಸಂಚಾಲಕಿ, ಸಂಗೀತ ಶಿಕ್ಷಕಿ ಗುರುಪ್ರಿಯ ಶಿವಾನಂದ ಕಾಮತ್ ಸ್ವಾಗತಿಸಿದರು. ಶಿವಾನಂದ್ ಕಾಮತ್ ಅತಿಥಿಗಳನ್ನು ಗೌರವಿಸಿದರು. ಅಕ್ಷತಾ ನಾಯಕ್ ಪ್ರಾ ರ್ಥಿಸಿದರು.ಕಲಾಕೇಂದ್ರದ ಸದಸ್ಯೆ ದಿವ್ಯ ಪುತ್ತೂರು ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts