ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಪಿಲಿಮೊಗ್ರು ಗ್ರಾಮದ ಬಾರೆಕ್ಕಿನಡೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ದುರ್ಮರಣಕ್ಕೊಳಗಾದ ಗೋಪಾಲ ಶೆಟ್ಟಿ ಮತ್ತು ದಿವ್ಯಶ್ರೀ ಮನೆಗೆ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತರ ಕುಟುಂಬಕ್ಕೆ ತಕ್ಷಣ ಸೂಕ್ತವಾದ ಪರಿಹಾರ ಒದಗಿಸುವಂತೆ ಮೆಸ್ಕಾಂನ ಮೇಲಾಧಿಕಾರಿಗಳಿಗೆ ಶಾಸಕರು ಕರೆ ಮಾಡಿ ಸೂಚಿಸಿದರು. ಈ ಸಂದರ್ಭ ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪಕ್ಷದ ಪ್ರಮುಖರಾದ, ನಂದರಾಮ ರೈ, ಗಣೇಶ್ ರೈ ಮಾಣಿ , ಗೋಪಾಲಕೃಷ್ಣ ಚೌಟ, ದಿನೇಶ್ ದಂಬೆದಾರು, ವಿಜಯ ರೈ ಆಲದಪದವು, ರವಿರಾಮ, ಸಂತೋಷ್ ಜೈನ್, ಪ್ರಕಾಶ್ ಕಕ್ಕಿಬೆಟ್ಟು, ಚಂದ್ರಶೇಖರ್ ಶೆಟ್ಟಿ, ಚೇತನ್, ಜಗದೀಶ್ ಉಪಸ್ಥಿತರಿದ್ದರು. ಇದೇ ವೇಳೆ ಮೃತರ ಸಂಬಂಧಿ ಪುರುಷೋತ್ತಮ ಶೆಟ್ಟಿ ವಾಮದಪದವು ಅವರಿಂದ ಘಟನೆಯ ಬಗ್ಗೆ ಶಾಸಕರು ಮಾಹಿತಿ ಪಡೆದು ಘಟನಾ ಸ್ಥಳವನ್ನು ವೀಕ್ಷಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)