ಪ್ರಮುಖ ಸುದ್ದಿಗಳು

ಪರಿಸರ ಜಾಗೃತಿ ಮಾಹಿತಿ ಕಾರ್ಯಗಾರ, ಸಸಿ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ವ್ಯಾಪ್ತಿಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಗಾರ ಮತ್ತು ಸಸಿವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಾಂತನಾಯಕ್ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ಆವೈಜ್ಞಾನಿಕ ಯೋಜನೆಗಳು ಮತ್ತು ಮನುಷ್ಯನ ನಿರ್ಲಕ್ಷದಿಂದಾಗಿ ಬರಗಾಲದ ಸನ್ನಿವೇಶಗಳು ಬರುತಿದೆ. ಪರಿಸರ ಸಂರಕ್ಷಣೆ ಮಾಡಬೇಕಾದ ನಾವು ರಸ್ತೆ ಅಗಲೀಕರಣ ಹಾಗೂ ಇತರ ಯೋಜನೆಗಳ ಹೆಸರಿನಲ್ಲಿ ಸಹಸ್ರ ಸಂಖ್ಯೆಯಲ್ಲಿ ಮರಗಿಡಗಳ ಹನನ ಆಗುತಿದ್ದು ಮುಂದಿನ ದಿನಗಳಲ್ಲಿ ಇದರಿಂದ ವಿವಿಧ ರೀತಿಯಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಹಿಂದಿನ ಕೆಲವು ವರ್ಷಗಳ ಹಿಂದೆ ಪರಿಸರದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಗಿಡಗಳನ್ನು ಗುರುತಿಸುವ ಕಾರ್ಯಕ್ರಮ ನಡೆಯುತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಯಾವ ಚಟುವಟಿಕೆಗಳು ನಡೆಯುತಿಲ್ಲ ಬದಲಾಗಿ ಸಸ್ಯ ಪ್ರಭೇದಗಳ ಪರಿಚಯವು ಇಂದಿನ ಯುವಜನತೆಗಿಲ್ಲ ಪ್ರತಿಯೋಬ್ಬರು ತಮ್ಮ ತಮ್ಮ ಹುಟ್ಟು ಹಬ್ಬದ ದಿನವಾದ್ರು ಒಂದೊಂದು ಗಿಡ ನಾಟಿ ಮಾಡಿ ಪರಿಸರ ಸ್ನೇಹಿಯಾಗಬೇಕು ಸ್ವಾರ್ಥಿ ಮನುಷ್ಯನ ದುರಾಸೆಗೆ ಇಂದು ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ. ನೈಸರ್ಗಿಕ ಸಂಪತ್ತನ್ನು ನಾಶಪಡಿಸುತ್ತಿರುವ ವ್ಯಕ್ತಿಗಳು ಮನುಕುಲದ ಅಂತ್ಯಕ್ಕೆ ನಾಂದಿ ಹಾಡಿದ್ದಾರೆ. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮನುಷ್ಯ ಸೇರಿದಂತೆ ಪ್ರಾಣಿ ಪಕ್ಷಿ ಜೀವ ಸಂಕುಲಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ
ಎಲ್ಲರೂ ಒಂದು ಸಸಿ ನೆಡಿ, ಪ್ರತಿಯೊಬ್ಬರು ಒಂದೊಂದು ಸಸಿಗಳನ್ನು ನೆಡುವ ಮೂಲಕ ನಿತ್ಯ ಅವುಗಳ ಪೋಷಣೆಯಲ್ಲಿ ತೊಡಗಿದರೆ, ಆರೋಗ್ಯದ ಜತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಅಂದಾಗ ಮಾತ್ರ ಪರಿಣಾಮಕಾರಿಯಾಗಿ ಪರಿಸರ ಉಳಿಸಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಿ ಪರಿಸರ ಸಂರಕ್ಷಣೆಯ ಪುಣ್ಯದ ಕಾರ್ಯದಲ್ಲಿ ಒಂದಾಗಿ ಶ್ರಮಿಸ ಬೇಕು ಎಂದರು.

ಪರಿಸರ ಸ್ನೇಹಿ ಸೋಲಾರ್ ಇತ್ತಿಚಿನ ದಿನದಲ್ಲಿ ವಿವಿಧ ಕಾಮಗಾರಿಗಾಗಿ ಮರಗಿಡಗಳನ್ನು ಕಡಿಯುವ ಪ್ರವೃತಿ ಹೆಚ್ಚಾಗಿದ್ದು ಇವೆಲ್ಲದಕ್ಕೂ ಕಡಿವಾಣ ಹಾಕಬೇಕಾಗಿದೆ ವಿಪರೀತ ಹೊಗೆ ಪರಿಸರಕ್ಕೆ ಸೇರಿಕೊಂಡು ವಾತಾವರಣ ಕಲುಶಿತ ವಾಗುತ್ತಿದೆ ಈ ನಿಟ್ಟಿನಲ್ಲಿ ಪ್ರತಿ ಮನೆಗೂ ಸೋಲಾರ್ ಆಧಾರಿತ ಪರಿಕರಣೆಯನ್ನು ತೊಡಗಿಸಿಕೊಳ್ಳಿ ಎಂದು ಸೆಲ್ಕೋ ಸೋಲಾರ್ ವ್ಯವಸ್ಥಾಪಕ ಕಿರಣ್ ಸಲಹೆ ನೀಡಿದರು.

ಸುಮಾರು 250 ಸಸಿ ವಿತರಣೆಯನ್ನು ಈ ಸಂಧರ್ಭದಲ್ಲಿ ನಡೆಸಲಾಯಿತು. ಪರಿಸರ ಜಾಗೃತಿ ಹಾಗೂ ಸಸಿವಿತರಣಾ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಾಂತ ನಾಯಕ್ , ಕಾರೇಹಳ್ಳಿ ವಲಯದ ಮೇಲ್ವಿಚಾರಕ ರಾಜೇಶ.ಎಂ.ಕಾನರ್ಪ, ಸೆಲ್ಕೋ ಸೋಲಾರ್ ವ್ಯವಸ್ಥಾಪಕ ಕಿರಣ್, ವಲಯ ಒಕ್ಕೂಟದ ಅದ್ಯಕ್ಷ ಬಸವರಾಜು ಚಿಕೋನಹಳ್ಳಿ ವಿಜಯಕುಮಾರ್ ಚಿಕೋನಹಳ್ಳಿ, ರೈತ ಸಂಘದ ಮುಖಂಡರಾದ ಸೋಮಶೇಖರ ವಿರುಪಾಕ್ಷಿಪುರ, ನವಜೀವನ ಸಮಿತಿ ಸದಸ್ಯರಾದಅಶ್ವಥ್ ವಿರುಪಾಕ್ಷಿಪುರ,ಒಕ್ಕೂಟಗಳ ಅದ್ಯಕ್ಷರುಗಳಾದ ಮುಶೀರ ಅಕ್ತರ್, ರೂಪ , ಶಶಿ, ಜಯಂತಿ, ತಿರುಮಲೇಗೌಡ, ಸೇವಾಪ್ರತಿನಿಧಿಯವರಾದ ಚಂದ್ರಕಲಾ , ಗೌರಮ್ಮ, ಶಶಿಕಲಾ ಮತ್ತು ಒಕ್ಕೂಟದ ಪದಾಧಿಕಾರಿಗಳು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts