ಬಂಟ್ವಾಳ: ದ.ಕ.ಜಿಪಂ, ಬಂಟ್ವಾಳ ತಾಪಂ ಸಹಯೋಗದಲ್ಲಿ ಸಜಿಪನಡು ಗ್ರಾಪಂ ಆಶ್ರಯದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವಾದ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಸಜಿಪನಡು ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅದ್ಯಕ್ಷ ಮೊಹಮ್ಮದ್ ನಾಸೀರ್ ವಹಿಸಿದ್ದರು. ದ.ಕ.ಜಿಪಂ ಸ್ವಚ್ಛ ನೆರವು ಘಟಕದ ಸಂಯೋಜಕಿ ಮಂಜುಳಾ ಚಾಲನೆ ನೀಡಿದರು. ಗ್ರಾಮದ ಸ್ವಚ್ಛತೆ ಕೇವಲ ಗ್ರಾಮ ಪಂಚಾಯತ್ನಿಂದ ಸಾಧ್ಯವಿಲ್ಲ ಗ್ರಾಮ ಪಂಚಾಯತ್ನೊಂದಿಗೆ ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮುಖ್ಯವಾಗಿ ಗ್ರಾಮಸ್ಥರು ಕೈ ಜೋಡಿಸಿದರೆ ಮಾತ್ರ ಗ್ರಾಮ ಸ್ವಚ್ಛವಾಗುತ್ತದೆ ಎಂದು ಈ ಸಂದರ್ಭ ಅವರು ತಿಳಿಸಿದರು.
ಸ್ವಚ್ಛತೆ ಇದ್ದಲ್ಲಿ ಮಾತ್ರ ಆರೋಗ್ಯ ಸುಧಾರಣೆ ಆಗುತ್ತದೆ. ಪ್ರತಿಯೊಬ್ಬನ ಜೀವನ ಸ್ವಚ್ಛತೆಯಿಂದ ಕೂಡಿರಬೇಕು. ದೇಶದ ಅಭಿವೃದ್ಧಿಗೆ ಸ್ವಚ್ಛತೆಯೂ ಒಂದು ಕಾರಣ ಮಕ್ಕಳು ಈಗಿನಿಂದಲೇ ಸ್ವಚ್ಛಪರಿಸರ, ಸ್ವಚ್ಛಗ್ರಾಮ, ಸ್ವಚ್ಛರಾಜ್ಯ ಸ್ವಚ್ಛದೇಶ ಎಂಬ ಪರಿಕಲ್ಪನೆಯಲ್ಲಿದ್ದರೆ ಆಗ ನಮ್ಮ ದೇಶ ಸ್ವಚ್ಛ ಭಾರತವಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಮೊಹಮ್ಮದ್ ನಾಸಿರ್ ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸುನೀತಾ ಶಾಂತಿ ಮೋರಾಸ್ ಸದಸ್ಯರಾದ ಸುರೇಶ್, ಬೀಪಾತುಮ್ಮ, ಸಿಸಿಲಿಯಾವಾಸ್ ಉಪಸ್ಥಿತರಿದ್ದರು ಶಾಲಾ ಶಿಕ್ಷಕಿ ಪುಷ್ಪಲತ ಸ್ವಾಗತಿಸಿ, ಗ್ರಾ.ಪಂ ಸದಸ್ಯರಾದ ಸುರೇಶ್ ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.೧೫ರಿಂದ ಪ್ರತಿ ಶಾಲೆಯಲ್ಲಿ ಸ್ವಚ್ಛತೆ ಬಗ್ಗೆ ಪ್ರತಿಜ್ಞಾ ವಿಧಿ, ಪ್ರಬಂಧ ಸ್ಪರ್ಧೆ, ಶ್ರಮದಾನ, ಸಭೆ, ಬೀದಿನಾಟಕ, ಆರೋಗ್ಯ ಜಾಗೃತಿಗಳು ನಡೆಯಲಿವೆ.