ಕಲ್ಲಡ್ಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ.ವಿಭಾಗಕ್ಕೆ ಜೂನ್ 10ರಂದು ಚಾಲನೆ ದೊರಕಿತು.
ಉದ್ಯಮಿ ಸುಲೈಮಾನ್ ಹಾಜಿ ಉದ್ಘಾಟಿಸಿ, ಶಾಲಾ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶತಮಾನೋತ್ತರ ಬೆಳ್ಳಿಹಬ್ಬ ಆಚರಿಸುತ್ತಿರುವ ಈ ಶಾಲೆಯಲ್ಲಿ ಎಲ್.ಕೆ.ಜಿ, ಯುಕೆಜಿ ಸಹಿತ ಒಂದನೇ ತರಗತಿಯಿಂದ ಆಂಗ್ಲ ಬೋಧನೆ ಇದ್ದು, ಕಂಪ್ಯೂಟರ್ ಸಹಿತ ಆಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಈ ಸಂದರ್ಭ ಮಾಜಿ ಶಾಸಕ ರುಕ್ಮಯ ಪುಜಾರಿ, ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ನಾಗೇಶ್ , ಪ್ರಮುಖರಾದ ವಜ್ರನಾಥ ಕಲ್ಲಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಅಬುಬಕರ್ ಅಶ್ರಫ್ ಸ್ವಾಗತಿಸಿದರು.