ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆಯು ೧೦೦೦ ಕ್ಕೂ ಅಧಿಕ ಮಕ್ಕಳನ್ನು ಹೊಂದಿ ಭಾಷಾ ಮಾಧ್ಯಮದಲ್ಲೆ ಹೆಚ್ಚು ಮಕ್ಕಳನ್ನು ಹೊಂದಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಉತ್ತಮ ಶಿಕ್ಷಣ ನೀಡಿದರೆ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಇದಕ್ಕೆ ನಿದರ್ಶನ ಸರ್ಕಾರಿ ಶಾಲೆಯನ್ನು ಆಂಗ್ಲಮಾಧ್ಯಮವನ್ನು ಮಾಡುವ ಮೂಲಕ ಕನ್ನಡವನ್ನು ಮೂಲೆ ಗುಂಪಾಗಿಸಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ೨೦೧೯-೨೦ನೇ ಸಾಲಿನಲ್ಲಿ ಹೊಸದಾಗಿ ಶಾಲೆಗೆ ಸೇರಿದ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೀವನ ಮೌಲ್ಯಗಳನ್ನು ತಿಳಿಸಬೇಕಾದುದು ಶಾಲೆಯ ಕರ್ತವ್ಯ. ಆದರೆ ಬ್ರಿಟಿಷರ ಆಳ್ವಿಕೆಯಿಂದ ಕೇವಲ ಭಾರತೀಯರನ್ನು ಗುಲಾಮರಾಗಿಸಿದರಲ್ಲದೇ ಭಾರತದ ನೈಜ ಶಿಕ್ಷಣವನ್ನು ಬದಲಾಯಿಸಿವುದರ ಮೂಲಕ ಭಾರತೀಯ ಮೂಲ ತತ್ವ, ಇತಿಹಾಸವನ್ನು ಬದಲಾಯಿಸಿದ್ದಾರೆ ಭಾರತೀಯ ಸನಾತನ ಮಾದರಿಯ ಶಿಕ್ಷಣವನ್ನು ಮಗುವಿಗೆ ಕೊಡುವ ಧ್ಯೇಯವನ್ನು ಇಟ್ಟುಕೊಂಡು ಶಾಲೆ ಬಂದಿದೆ. ಇಲ್ಲಿ ರಾಷ್ಟ್ರೀಯತೆಯನ್ನು ಕಲಿಸಿಕೊಡುತ್ತದೆ ಎಂದರು.
ಕಾರ್ಯಕ್ರಮವು ಅತಿಥಿ ಗಣ್ಯರಿಂದ ದೀಪ ಪ್ರಜ್ವಲನೆಯ ಮೂಲಕ ಆರಂಭವಾಯಿತು. ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಅವರಿಗೆ ಅಧ್ಯಾಪಕ ವೃಂದದವರು ಆರತಿ, ಅಕ್ಷತೆ ತಿಲಕಧಾರಣೆ ಮಾಡಿ ಸಿಹಿ ನೀಡಿದರು. ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಘೃತಾಹುತಿಯನ್ನು ಮಾಡಿದರು. ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ಆರ್ಶಿವಾದ ಪಡೆದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ವೇದಿಕೆಯಲ್ಲಿ ಓಂ ಸಾರಾ ಇನ್ಫ್ರಾ ಕಂಪನಿಯ ಮಾಲೀಕ ಎಚ್,ಎನ್ ಚಂದ್ರಶೇಖರ್, ಕಾರ್ಕಳದ ಕಾರ್‍ಲ ಕನ್‌ಸ್ಟ್ರಕ್ಷನ್ ಕಂಪೆನಿಯ ಆಡಳಿತ ಪಾಲುದಾರರಾದ ಸೌಮ್ಯ ಶೆಟ್ಟಿ ಹಾಗೂ ದೇವದಾಸ್, ಬಿ.ಎಸ್.ಎನ್.ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶ್ರೀಧರ್ ಭಟ್ ಗಿಲ್ಕಿಂಜ, ಮಂಡ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶನ್ ಗೌಡ, ಕರ್ನಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಮಂಗಳೂರಿನ ಅಸಿಸ್ಟೆಂಟ್ ಮ್ಯಾನೇಜರ್ ಚಂದ್ರಶೇಖರ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್, ಡಾ. ಕಮಲಾ ಪ್ರಭಾಕರ್ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್ ಹಾಗೂ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೇಷ್ಮಾ ನಿರೂಪಿಸಿದರು ರೂಪಕಲಾ ಎಮ್ ಸ್ವಾಗತಿಸಿದರು.