ಜಂಜಾಟದ ಬದುಕಿನಲ್ಲಿ ನಿರತರಾಗಿರುವ ಈ ಸಮಯದಲ್ಲಿ ತಮ್ಮ ಶುಭ ಸಮಾರಂಭಗಳ ತಯಾರಿಯನ್ನು ಸರಳವಾಗಿಸುವ ನಿಟ್ಟಿನಲ್ಲಿ ದ.ಕದಲ್ಲಿ ಈಗಾಗಲೇ ಶೀಘ್ರವಾಗಿ ಛಾಪನ್ನು ಮೂಡಿಸಿರುವ ವಿನೂತನ ಆಮಂತ್ರಣ ಪತ್ರಿಕೆಗಳ ಮಳಿಗೆ ಇನ್‌ಗ್ಯಾಲರಿ ತಮ್ಮ ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ www.ingallery.in ಲೋಕಾರ್ಪಣೆಗೊಳಿಸಿತು.
ಭಾರತೀಯ ಕಥೋಲಿಕ್ ಯುವ ಸಂಚಾಲನ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂ| ರೊನಾಲ್ಡ್ ಡಿಸೋಜ ರವರು ವೆಬ್‌ಸೈಟ್‌ನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿರುವ ಯುವ ಪೀಳಿಗೆಯ ಮಹತ್ವವನ್ನು ತಿಳಿಸಿದರು.
ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಯುವ ಪೀಳಿಗೆಯು ಉದ್ಯಮ ಕ್ಷೇತ್ರದಲ್ಲೂ ಗಮನ ಹರಿಸಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಹೊಸ ಅವಿಷ್ಕಾರಗಳೊಂದಿಗೆ ಸಮಾಜದ ಉನ್ನತಿಗಾಗಿ ಶ್ರಮಿಸುವ ಅಗತ್ಯವಿದೆ ಎಂದು ತಿಳಿಸಿದರು ಹಾಗೂ ಸಂಸ್ಥೆಯ ಮಾಲಕರಾದ ಆಲ್ವ್ವಿನ್ ಡಿಸೋಜರವರ ಈ ಹೆಜ್ಜೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಐ.ಸಿವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಜೈಸನ್ ಪಿರೇರಾ, ಉದ್ಯಮಿಗಳಾದ ನೆಲ್ಸನ್ ಫ್ರ್ಯಾಂಕ್, ಸನೋದ್ ಲೋಬೊ ಹಾಗೂ ಮರ್ವಿನ್ ಡಿಸಿಲ್ವ, ಉಪನ್ಯಾಸಕರಾದ ನೆಲ್ಸನ್ ಮೊನಿಸ್ ಉಪಸ್ಥಿತರಿದ್ದರು.
ವೆಬ್‌ಸೈಟ್ ಅನಾವರಣ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಹೊಸ ಉತ್ಪನ್ನ ಪರಿಚಯಿಸಿದ ಆಲ್ವಿನ್ ಡಿಸೋಜರವರು ನಮ್ಮಲ್ಲಿ ಪ್ರಿಂಟೆಡ್ ಮೊಬೈಲ್ ಕವರ್ ಉತ್ತಮ ಗುಣಮಟ್ಟದಲ್ಲಿ ದೊರಕುತ್ತವೆ ಎಂದು ತಿಳಿಸಿದರು.
ಸಂಸ್ಥೆಯ ಡಿಸೈನರ್‌ಗಳಾದ ಅಭಿಷೇಕ್ ಪಿಲಿಂಗಾಲು ಹಾಗೂ ಸತೀಶ್ ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 91 9880921097, +91 9743521097
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…