ನೀರು ಸ್ಟಾಕ್ ಇದ್ದರೂ ಹೂಳು ತುಂಬಿದ ಕಾರಣ ಹರಿಯಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೂಚನೆಯಂತೆ ಡ್ರಜ್ಜಿಂಗ್ ನಡೆಸಿದ್ದು ಫಲ ನೀಡಿದೆ.
ಬುಧವಾರ ನೇತ್ರಾವತಿಯಲ್ಲಿ ನೀರು ಹರಿದಿದ್ದು, ಬಂಟ್ವಾಳಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದಂತಾಗಿದೆ.
ಎಂ.ಆರ್.ಪಿ.ಎಲ್ ಡ್ಯಾಂ ನಲ್ಲಿ ನೀರು ಸ್ಟಾಕ್ ಇದ್ದರೂ ವ್ಯವಸ್ಥೆ ಇಲ್ಲದೆ ಉಪಯೋಗ ಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ಮಂಗಳವಾರ ನಡೆಸಿದ್ದ ಶಾಸಕ ರಾಜೇಶ್ ನಾಯ್ಕ್, ಎಂ.ಆರ್.ಪಿ.ಎಲ್.ಡ್ಯಾಂ ನ ಲ್ಲಿ ಹೂಳು ತುಂಬಿದ್ದು ನೀರಿನ ಹರಿಗೆ ತೊಂದರೆಯಾಗಿರುವುದನ್ನು ಕಂಡು, ಕೂಡಲೇ ಸ್ಥಳಕ್ಕೆ ಡ್ರಜ್ಜಿಂಗ್ ಮೆಷಿನ್ ತರಿಸಿ, ಹೂಳು ತೆಗೆಸಲು ಸೂಚಿಸಿದ್ದರು.
Click here to read more: