ರೋಟರಿ ಕ್ಲಬ್ ಬಂಟ್ವಾಳ, ಇಂಟರಾಕ್ಟ್ ಕ್ಲಬ್ ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ ಮತ್ತು ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಬಿ.ಸಿ.ರೋಡು ಸಹಯೋಗದಲ್ಲಿ ಸಿದ್ದಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಡಶಾಲಾ ವಿಭಾಗದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಗಾರ” ಕ್ಕೆ ಸೋಮವಾರ ಚಾಲನೆ ದೊರೆಯಿತು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗಾ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯತು ಸದಸ್ಯ ಪ್ರಭಾಕರ ಪ್ರಭು ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರತಿಯೊಬ್ಬರೂ ತಮ್ಮಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಅದನ್ನು ಸಾಮರ್ಥ್ಯಗಳನ್ನಾಗಿ ಪರಿವರ್ತಿಸಿಕೊಂಡಾಗ ಬದುಕಿನ ಹಾದಿ ಸುಗಮವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಶಾಲೆಗಳಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಸಂಗಬೆಟ್ಟು ಗ್ರಾಮ ಪಂಚಾಯತು ಅಧ್ಯಕ್ಷೆ ಗುಲಾಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತು ಸದಸ್ಯರಾದ ಶ್ರೀಧರ್ ಎಸ್.ಪಿ., ಸುಲೋಚನಾ, ಶಾಲಾ ಉಪಪ್ರಾಂಶುಪಾಲ ರಮಾನಂದ, ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ನಿರ್ದೇಶಕ ಗೋಪಾಲ ಅಂಚನ್ , ರೋಟರಿ ಕ್ಲಬ್ ಕಾರ್ಯದರ್ಶಿ ಸ್ಮಿತಾ ಉಪಸ್ಥಿತರಿದ್ದರು. ಶಿಕ್ಷಕಿ ಮಾರ್ಗರೇಟ್ ಪಿಂಟೊ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಕರ್ಕೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ವ ಅರಿವು, ಸಂವಹನ ಕೌಶಲ್ಯ, ನಾಯಕತ್ವ, ಮಾತುಗಾರಿಕೆ, ವ್ಯಕ್ತಿತ್ವ ವಿಕಸನ, ವೃತ್ತಿ ಆಸಕ್ತಿ, ಸಮಾಜವನ್ನು ಅರ್ಥ ಮಾಡುವಿಕೆ, ಕಲಿಕಾ ಕೌಶಲ್ಯ ಮೊದಲಾದ ವಿಷಯಗಳಲ್ಲಿ ತರಬೇತಿ ನಡೆಯಿತು. ಗೋಪಾಲ ಅಂಚನ್, ಉದಯ ಕುಮಾರ್ ಜ್ಯೋತಿಗುಡ್ಡೆ, ಪ್ರತಾಪ್ ಚೆಂಡ್ತಿಮಾರ್, ಪ್ರತಿಮಾ ಬಿ.ಸಿ.ರೋಡು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.