ಬಂಟ್ವಾಳ: ಇಲ್ಲಿನ ಬಿ.ಆರ್.ಎಂ.ಪಿ. ಶಾಲೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಧೂಮಪಾನದಿಂದ ಉಂಟಾಗುವ ಮಾರಕ ರೋಗಗಳ ಕುರಿತಾದ ಜಾಗೃತಿ ಮೂಡಿಸುವ ಪ್ರಹಸನವನ್ನು ಪ್ರದರ್ಶಿಸಿದರು. ಸಮೂಹ ಗಾಯನ, ಲೇಖನ, ರಸಪ್ರಶ್ನೆಗಳಂತಹ ಕಾರ್ಯಕ್ರಮಗಳನ್ನು ನೀಡಿ ಅರಿವು ಮೂಡಿಸಿದರು. ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ. ಹಾಗೂ ಇತರ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…