ಬಂಟ್ವಾಳ

ಜೈನ್ ಮಿಲನ್ ಮಂಗಳೂರು ವಿಭಾಗ ಪದಾಧಿಕಾರಿಗಳ ಕಾರ್ಯಾಗಾರ

ಸಂಘಟನೆ ನಡೆಸುವಾಗ ನಾಯಕತ್ವದ ಗುಣ ಮುಖ್ಯ ಎಂದು ಭಾರತೀಯ ಜೈನ್ ಮಿಲನ್ ವಲಯ ೮ರ ಹಿರಿಯ ಉಪಾಧ್ಯಕ್ಷ ಡಾ| ಬಿ.ಯಶೋವರ್ಮ ಅಭಿಪ್ರಾಯಪಟ್ಟರು.

ಜೂ. ೨ರಂದು ಬಿ.ಸಿ.ರೋಡ್ ಸ್ವರ್ಶ ಕಲಾ ಮಂದಿರದಲ್ಲಿ ಭಾರತೀಯ ಜೈನ್ ಮಿಲನ್ ವಲಯ ೮ರ  ಮಂಗಳೂರು ವಿಭಾಗ ಪದಾಧಿಕಾರಿಗಳ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಹೆಸರಾಂತ ನಾಯಕರು ಸಾಧನೆಗಳ ಮೂಲಕ ನೇತಾರರಾಗಿದ್ದಾರೆ. ಸತತ ಪ್ರಯತ್ನ ನಿರಂತರ ಕೆಲಸ, ಅವಿರತ ಶ್ರಮ ಸಾಧನೆಗಳು ಉನ್ನತ ಸ್ಥಾನ ಮಾನಕ್ಕೆ ಏರಿದವರು ಮಾಡಿದ ಕರ್ತವ್ಯಗಳು. ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ನಾಯಕತ್ವ ತನ್ನಷ್ಟಕ್ಕೆ ನಮಗೆ ಒಲಿದು ಬರುತ್ತದೆ. ಕಷ್ಟಗಳು ಎಲ್ಲರಿಗೂ ಇದೆ. ಅದನ್ನು ಹೊತ್ತುಕೊಂಡು ಮಾತನಾಡುವ ಬದಲು ಹೊಸ ದಾರಿಗಳ ಕಡೆಗೆ , ವಿಚಾರಗಳ ಕಡೆಗೆ ಗಮನ ನೀಡಿ. ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ ಧನಾತ್ಮಕ ಚಿಂತನೆಗಳಿಂದ ಮುಂದುವರಿಯಿರಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರೀತಿಯಿಂದ ಕರೆದು ಮಾತನಾಡಿಸಿ, ಕಷ್ಟ ಸುಖ ವಿಚಾರಿಸಿ, ಬಂಧುತ್ವವನ್ನು ಬೆಳೆಸಿಕೊಳ್ಳಿ. ಎಲ್ಲ ಕಡೆಯಲ್ಲೂ ವೈವಿಧ್ಯಗಳನ್ನು ಹಮ್ಮಿಕೊಳ್ಳಿರಿ. ನಾವು ನಾಯಕರಾಗುವುದು ಜನರಿಂದ, ಹಾಗಾಗಿ ಜನತೆಯ ವಿಶ್ವಾಸಪಡೆಯುವಲ್ಲಿ ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಭಾರತೀಯ ಜೈನ್ ಮಿಲನ್ ವಲಯ ೮ರ ಅಧ್ಯಕ್ಷ ಪುಷ್ಪರಾಜ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಧಾರ್ಮಿಕ  ಶೈಕ್ಷಣಿಕ ವ್ಯವಸ್ಥೆಗಳಲ್ಲಿ ನಾವು ತೊಡಗಿಕೊಂಡಾಗ ಪರಸ್ಪರ ವಿಚಾರ ವಿಮರ್ಶೆ ಮಾಡಿಕೊಳ್ಳಿ. ಆಂತರಿಕವಾಗಿ ನಾವು ಸಂಘಟಿತರಾದಾಗ ಬಹಿರಂಗದಲ್ಲಿ ನಮಗೆ ಚರ್ಚಿಸಲು ಸಮರ್ಪಕ ಉತ್ತರ ನೀಡಲು, ಕ್ರೋಢಿಕೃತ ಸಮಗ್ರ ಅಭಿಪ್ರಾಯ ಮಂಡಿಸಲು ಸಾಧ್ಯ. ಹಾಗಾಗಿ ಮಿಲನ್ ಪದಾಧಿಕಾರಿಗಳು ಸಂಘಟತ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ವಲಯ ೮ರ ಉಪಾಧ್ಯಕ್ಷ ಜಿತೇಶ್ ಜೈನ್ ಮಂಗಳೂರು, ಪ್ರ.ಕಾರ್ಯದರ್ಶಿ ರಾಜೀವ್ ಎಮ್, ನಿಕಟಪೂರ್ವ ಕಾರ್ಯದರ್ಶಿ ಸುಮತಿ ಕುಮಾರ್ ದಾವಣಗೆರೆ, ವಲಯ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿಭಾಗ ನಿರ್ದೇಶಕರಾದ ಜಯರಾಜ್ ಕಂಬಳಿ,  ರಾಜವರ್ಮ ಆರಿಗ,  ಸೋಮಶೇಖರ ಶೆಟ್ಟಿ, ಧನ್ಯ ಕುಮಾರ್ ರೈ,  ಮಹಾವೀರ ಹೆಗ್ಡೆ ಅಂಡಾರ್, ದೇವರಾಜ್ ವಗಕೆರೆ, ಪ್ರಮೋದ್ ಕುಮಾರ್, ಧರ್ಮಪಾಲ್ ಹೆಗ್ಡೆ ಕಳಸ ಉಪಸ್ಥಿತರಿದ್ದರು.

ದ.ಕ.,ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜೈನ್ ಮಿಲನ್ ಶಾಖೆಗಳ ಪದಾಧಿಕಾರಿಗಳು ಕಾರ್ಯಾಗಾರ ಸಭೆಯಲ್ಲಿ ಭಾಗವಹಿಸಿದ್ದರು.

ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಉಪಾಧ್ಯಕ್ಷ ಸುದರ್ಶನ ಜೈನ್ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ| ಸುದೀಪ್ ಕುಮಾರ್ ಸಿದ್ದಕಟ್ಟೆ ವಂದಿಸಿದರು. ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts