ಕಳೆದ ಒಂದು ವರ್ಷದಿಂದ ಬಂಟ್ವಾಳ ಕ್ಷೇತ್ರದಲ್ಲಿ ಕೋಮು ಗಲಭೆಗಳಾಗಿಲ್ಲ, ಶಾಂತಿ ನೆಮ್ಮದಿ ಇದೆ ಎಂಬ ಪ್ರಚಾರಗಳು ಕಾಣಿಸುತ್ತಿವೆ. ಹಿಂದೆಯೂ ಅಷ್ಟೇ, ಈಗಲೂ ಅಷ್ಟೇ, ಬಂಟ್ವಾಳ ಕ್ಷೇತ್ರದಲ್ಲಿ ನಡೆದ ಕೊಲೆ ಹಾಗು ಕೋಮು ಸಾಮರಸ್ಯ ಕದಡಿದ ಆರೋಪಗಳ್ಯಾವುವೂ ಕಾಂಗ್ರೆಸ್ ಕಾರ್ಯಕರ್ತರ ಹೆಸರಲ್ಲಿಲ್ಲ. ಕೋಮು ಸಾಮರಸ್ಯ ಕದಡಿದವರು ಕಾಂಗ್ರೆಸ್ ಪಕ್ಷದವರಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಿ.ಸಿ.ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಬೆಳಗ್ಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಪೋಲೀಸರು ನಿಪಕ್ಷಪಾತವಾಗಿ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು. ಇದುವರೆಗೆ ಬಡಕಬೈಲಿನಲ್ಲಿ ಮಿಥುನ್ ರೈ ವಿರುದ್ಧ ಆಕ್ಷೇಪಾರ್ಹವಾಗಿ ನಿಂದಿಸಿದ ಪ್ರಕರಣದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದು, ಇದಲ್ಲದೆ ಪಂಚಾಯತ್ ಜನಪ್ರತಿನಿಧಿಗಳನ್ನು ಬೆದರಿಸುವ ಕಾರ್ಯವೂ ನಡೆದಿದ್ದು, ಇದರಲ್ಲೂ ಪೊಲೀಸರು ಒತ್ತಡಕ್ಕೆ ಮಣಿಯದೆ ಕೆಲಸ ಮಾಡಬೇಕು ಎಂದರು. ಕಲ್ಲಡ್ಕಕ್ಕೆ ಅಕ್ಕಿಯನ್ನು ತಾನು ನಿಲ್ಲಿಸಿಲ್ಲ. ದೇವಸ್ಥಾನದ ದುಡ್ಡು ಅಲ್ಲಿಗೆ ಹೋಗುವುದು ದುರುಪಯೋಗವಾಗದಿರಲಿ ಎಂದು ಕ್ರಮ ಕೈಗೊಳ್ಳಲಾಯಿತು, ಆದರೆ ತನ್ನ ವಿರುದ್ಧ ಅಪಪ್ರಚಾರ ನಡೆಯಿತು ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.