ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ಮಕ್ಕಳು ಬಲೂನುಗಳನ್ನು ಹಿಡಿದು ಅದರಲ್ಲಿ ಅವರ ಹೆಸರು ಬರೆದು ಆಟವಾಡುವ ಮೂಲಕ ಬಂಟ್ವಾಳ ಎಸ್.ವಿ.ಎಸ್. ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಬುಧವಾರ ವಿನೂತನವಾಗಿ ನಡೆಯಿತು.
ಬೆಳಗ್ಗೆ ಮಕ್ಕಳ ಪ್ರಾರ್ಥನೆ ನಂತರ ೧ರಿಂದ ೫ನೇ ತರಗತಿ ವರೆಗಿನ ಪ್ರತೀ ಮಕ್ಕಳಿಗೆ ಬಲೂನುಗಳನ್ನು ನೀಡಿ ಅದರಲ್ಲಿ ಅವರ ಹೆಸರನ್ನು ರೆದು ಬಲೂನಿನ ಆಟದೊಂದಿಗೆ ವಿವಿಧ ರೀತಿಯ ಆಟಗಳನ್ನು ಆಡಿಸುವ ಮೂಲಕ ಆರಂಭ ಮಾಡಲಾಯಿತು. ಸುಮಾರು ಒಂದು ಗಂಟೆಗಳ ಕಾಲ ಆಟವಾಡಿದ ಮಕ್ಕಳಿಗೆ ಬಳಿಕ ಶಾಲಾ ದೈನಂದಿನ ಪಾಠಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು. ಬಂಟ್ವಾಳ ಶಿಕ್ಷಣ ಇಲಾಖೆಯ ಸಿಆರ್‌ಪಿ ರೇಶ್ಮಾ ಮತ್ತು ಬಿಐಈಆರ್‌ಟಿ ಶೋಭಾ ಈ ಸಂದರ್ಭ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಮ್ಮ ಹಾಗೂ ಇತರೇ ಶಿಕ್ಷಕಿಯರಾದ ಮಾಲತಿ, ಜಯಶ್ರೀ, ಪೂರ್ಣಿಮಾ ಈ ಸಂದರ್ಭ ಸಹಕರಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…