ವರ್ಷದ ಹಿಂದೆಯಷ್ಠೆ ಅಸ್ತಿತ್ವಕ್ಕೆ ಬಂದಿರುವ ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಕ್ಲಬ್ ಹತ್ತು ಹಲವು ಚಟುವಟಿಕೆಯಿಂದ ರೋಟರಿಜಿಲ್ಲೆ 3181ರಲ್ಲಿ ಅದ್ಬುತ ಕ್ಲಬ್ ಆಗಿ ಮೂಡಿ ಬಂದಿದೆ ಎಂದು ರೋಟರಿ 3181 ರ ಗವರ್ನರ್ ರೋಹಿನಾಥ ಪಾದೆ ಹೇಳಿದರು. ಮಂಗಳವಾರ ಸಂಜೆ ರೋಟರಿ ಹಿಲ್ಸ್ ಕ್ಲಬ್ ಗೆ ಅಕೃತ ಭೇಟಿ ನೀಡಿ ಬಂಟ್ವಾಳಕ್ಕೆ ಸಮೀಪದ ಲೊರೆಟ್ಟೋ ಗ್ರೀನ್ ಸಿಟಿಯಲ್ಲಿ ಸುಮಾರು ೩೨ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ರೋಟರಿ ಲೊರೆಟ್ಟೋ ಹಿಲ್ಸ್ ನ ನೂತನ “ರೋಟರಿ ಸಭಾಭವನ” ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಚ್ಚಾಶಕ್ತಿಯಿದ್ದರೆ ಎಂತಹ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ರೋಟರಿ ಲೊರೆಟ್ಟೋ ಹಿಲ್ಸ್ ಅಸ್ತಿತ್ವಕ್ಕೆ ಬಂದ ವರ್ಷದಲ್ಲಿಯೇ ನಿರ್ಮಾಣವಾದ ಈ ಕಟ್ಟಡವೇ ಸಾಕ್ಷಿಯಾಗಿದ್ದು ,ಇದಕ್ಕೆ ಸಹಕರಿಸಿದ ಕ್ಲಬ್ ನ ಸದಸ್ಯರನ್ನು ಅಭಿನಂದಿಸಿದರು.
ರೋಟರಿ ಜಿಲ್ಲೆ ೩೧೮೧ ರ ವ್ಯಾಪ್ರಿಯಲ್ಲಿ ಸುಮಾರು ೨೫೦ ಕ್ಕು ಅಂಗನವಾಡಿ ಕೇಂದ್ರವನ್ನು ನಿರ್ಮಿಸಲಾಗಿದೆ. ಕೊಡಗು ಜಿಲ್ಲೆಯ ಸಂತ್ರಸ್ಥರಿಗೆ 50 ಮನೆಗಳನ್ನು ನಿರ್ಮಿಸುವ ಗುರಿಯನ್ನು ರೋಟರಿ ಸಂಸ್ಥೆ ಹೊಂದಿದ್ದು,ಇದಕ್ಕಾಗಿ 21 ಕೋ.ರೂ.ಸಂಗ್ರಹವಾಗಿದೆ ಎಂದು ಹೇಳಿದ ಅವರು ಪ್ರಸಕ್ತ ದಿನಗಳಲ್ಲಿ ರೋಟರಿ ಸಂಸ್ಥೆ ಶಕ್ತಿಯುತವಾಗಿ ಬೆಳೆಯುತ್ತಿದೆ ಎಂದರು. ಸಮಾಜದ ಬದಲಾವಣೆಯಲ್ಲಿ ರೋಟರಿ ಕೂಡ ಪೂರಕವಾಗಿ ಸ್ಪಂದಿಸುತ್ತಿದೆ. ರೋಟರಿಗೆ ಸೇರ್ಪಡೆಯಾಗುವ ಹೊಸ ಸದಸ್ಯರಿಗೆ ಹಿರಿಯ ಸದಸ್ಯರಿಂದ ರೋಟರಿಯ ಯೋಜನೆ, ಕಾರ್ಯಕ್ರಮಗಳ ಅರಿವು ಮೂಡಿಸುವ ಕಾರ್ಯಾಗಬೇಕಾಗಿದೆ.ಸದಸ್ಯರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾದ ಸೇವೆ ಮಾಡಬೇಕು ಎಂದರು.
ಸಭಾ ಕಾರ್ಯಕ್ರಮವನ್ನು ಲೊರೆಟ್ಟೋ ಚಚ್೯ನ ಧರ್ಮ ಗುರು ಇಲ್ಯಾಸ್ ಡಿ.ಸೋಜ ಉದ್ಘಾಟಿಸಿ ರೋಟರಿ ಕ್ಲಬ್ ನಿಂದ ಮಾನವೀಯ ಮೌಲ್ಯ, ಶಿಕ್ಷಣದ ಜೊತೆ ಜನಸೇವೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವುದು ಶ್ಲಾಘನೀಯ ಎಂದರು. ವಲಯ 4 ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ,ಕಟ್ಟಡ ಸಮಿತಿ ಅಧ್ಯಕ್ಷ ಆಂಟನಿ ಸ್ವಿಕ್ವೇರ, ಕೋಶಾಕಾರಿ ಶೃತಿ ಮಾಡ್ತ ಉಪಸ್ಥಿತರಿದ್ದರು.
ರೋಟರಿ ಲೊರೆಟ್ಟೊ ಹಿಲ್ಸ್ ಆಧ್ಯಕ್ಷ ಅವಿಲ್ ಮಿನೇಜಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿಗಾರ್ ವರದಿ ವಾಚಿಸಿದರು. ನಿಯೋಜಿತ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಜಿಲ್ಲಾ ಗವರ್ನರ್ ರ ಪರಿಚಯ ಪತ್ರವಾಚಿಸಿದರು.
ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ವಂದಿಸಿದರು. ಇದೇ ವೇಳೆ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ವರನ್ನು ಗೌರವಿಸಲಾಯಿತು.