ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಮುಂಡೂರು ಗ್ರಾಮದ ಕೋಟಿಕಟ್ಟೆಯಲ್ಲಿ ಮಾಲಾಡಿ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಮಾರಾಕಾಸ್ತ್ರಗಳಿಂದ ರಸ್ತೆ ಮಧ್ಯೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ವಿಕ್ರಂ ಜೈನ್ (45) ಕೊಲೆಯಾದವರು. ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಲಾಡಿ ಸರಕಾರಿ ಐಟಿಐ ಉಪನ್ಯಾಸಕರಾಗಿದ್ದ ಜೈನ್ಎಂ ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಇರಿಯಲಾಗಿದೆ. ಸುಮಾರು 11 ಗಂಟೆಯ ಬಳಿಕ ಕೃತ್ಯ ನಡೆದಿರಬಹುದು ಎಂದು ಸಂಶಯಿಸಲಾಗಿದೆ. ವೈಯಕ್ತಿಕ ಕಾರಣವೇ, ಆಸ್ತಿ ವಿವಾದ ಅಥವಾ
ಬೇರೆ ಯಾವುದಾದರೂ ಒಂದು ವಿಚಾರಕ್ಕೆ ದ್ವೇಷಕ್ಕಾಗಿ ಕೊಲೆ ನಡೆದಿರಬಹುದೆಂದು ಶಂಕಿಶಲಾಗಿದೆ. ಈಗಾಗಲೇ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…