ಮತದಾನೋತ್ತರ ಸಮೀಕ್ಷೆಗಳನ್ನು ನಿಜ ಮಾಡುವಂತೆ ಫಲಿತಾಂಶಗಳು ಕಾಣಿಸತೊಡಗಿವೆ. ಗುರುವಾರ ಮತ ಎಣಿಕೆ ನಡೆಯುತ್ತಿದ್ದಂತೆ ಮುನ್ನಡೆಗಳನ್ನು ಆಧರಿಸಿ ಹೇಳುವುದಾದರೆ ಎನ್.ಡಿ.ಎ. ಕಳೆದ ಬಾರಿಯಂತೆ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಯೊಂದೇ 277 ಸೀಟುಗಳಲ್ಲಿ ಮುಂದಿರುವುದು ಗಮನಾರ್ಹ.
ಬೆಳಗ್ಗೆ 10 ಗಂಟೆಗೆ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ ಮುನ್ನಡೆ ಪಟ್ಟಿಯನ್ನು ಆಧರಿಸಿ ಹೇಳುವುದಾದರೆ, ಬಿಜೆಪಿ 277 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 51 ಸ್ಥಾನಗಳಲ್ಲಷ್ಟೇ ಮುಂದಿದ್ದರೆ, ತೃಣಮೂಲ ಕಾಂಗ್ರೆಸ್ 21, ಡಿಎಂಕೆ 21 ಸ್ಥಾನಗಳಲ್ಲಿ ಮುಂದೆ ಇವೆ.
ಪಶ್ಚಿಮ ಬಂಗಾಳದಲ್ಲಿ 42ರಲ್ಲಿ 35 ಸ್ಥಾನಗಳ ಮುನ್ನಡೆಯ ಪೈಕಿ 21ರಲ್ಲಿ ತೃಣಮೂಲ ಕಾಂಗ್ರೆಸ್, 12ರಲ್ಲಿ ಬಿಜೆಪಿ ಇದೆ. ಕೇರಳದಲ್ಲಿ ಕಾಂಗ್ರೆಸ್ 15 ಮುನ್ನಡೆ ಸಾಧಿಸಿದ್ದರೆ, ಕರ್ನಾಟಕದಲ್ಲಿ 23ರಲ್ಲಿ ಬಿಜೆಪಿ, 1ರಲ್ಲಿ ಪಕ್ಷೇತರ, 3ರಲ್ಲಿ ಕಾಂಗ್ರೆಸ್, ಜೆಡಿಎಸ್ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು ವಿಶೇಷ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ 13ನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 41624 ಮತಗಳ ಮುನ್ನಡೆ ಸಾಧಿಸಿದ್ದಾರೆ. ನಳಿನ್ ಕುಮಾರ್ ಕಟೀಲ್- 133065, ಮಿಥುನ್ ಎಂ.ರೈ- 91441 ಗಳಿಸಿದ್ದಾರೆ.