ಇದು 2014ರ ಫಲಿತಾಂಶ
ಈ ಬಾರಿ
ನಳಿನ್ ಕುಮಾರ್ ಕಟೀಲ್ (ಬಿಜೆಪಿ)- 774285, ಮಿಥುನ್ ಎಂ.ರೈ (ಕಾಂಗ್ರೆಸ್)- 499664 ಮೊಹಮ್ಮದ್ ಇಲ್ಯಾಸ್ (ಎಸ್ಡಿಪಿಐ) – 46839
ಬಿಜೆಪಿ ಮತವೃದ್ಧಿ:
ಕಳೆದ ಲೋಕಸಭಾ ಚುನಾವಣೆಗಿಂದ ಈ ಬಾರಿ ಸುಮಾರು 90 ಸಾವಿರದಷ್ಟು ಮತಗಳು ಬಿಜೆಪಿಗೆ ಈ ಬಾರಿ ಬಿದ್ದಿವೆ. ಕಾಂಗ್ರೆಸ್ ಮತಗಳು ಇಳಿಮುಖವಾದರೆ ಎಸ್.ಡಿ.ಪಿ.ಐ.ಗೆ ಜಾಸ್ತಿಯಾಗಿರುವುದು ಈ ಚುನಾವಣೆ ವಿಶೇಷ.
ಎಸ್.ಡಿ.ಪಿ.ಐ. ಮತವೃದ್ಧಿ
ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಎಸ್.ಡಿ.ಪಿ.ಐ. ತನ್ನ ಮತಗಳನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನವಾಗಿ ಟೀಕಿಸುತ್ತಿದ್ದ ಪಕ್ಷದ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ತುಂಬೆ 46839 ಮತಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಎಸ್.ಡಿ.ಪಿ.ಐಗೆ ದುಪ್ಪಟ್ಟು ಮತಗಳ ವೃದ್ಧಿಯಾಗಿದೆ.
ಕಳೆದ ಬಾರಿ 4,99,030 ಅಂದರೆ 5 ಲಕ್ಷದವರೆಗೆ ಇದ್ದ ಕಾಂಗ್ರೆಸ್ ಮತಗಳು ಈ ಬಾರಿ ಏರಿಕೆ ಕಂಡಿಲ್ಲ ಈ ಬಾರಿ ಅಭ್ಯರ್ಥಿ ಮಿಥುನ್ ರೈ 499664. ಗಳಿಸಿದ್ದು, ಹೊಸ ಮುಖವನ್ನಿಳಿಸಿದರೂ ಮತವೃದ್ಧಿಯಾಗಿಲ್ಲ.
1991ರಿಂದಲೂ ಬಿಜೆಪಿ ಗೆಲುವು:
ಕರ್ನಾಟಕದ ಮಟ್ಟಿಗೆ ಹಿಂದುತ್ವದ ಪ್ರಯೋಗ ಶಾಲೆ ಎಂದು ಹೇಳಲಾಗುವ ದಕ್ಷಿಣ ಕನ್ನಡ ಬಿಜೆಪಿಯ ಗಟ್ಟಿನೆಲವಾಗಿದೆ ಎಂದು 1991ರ ಫಲಿತಾಂಶಗಳು ತೋರಿಸಿಕೊಟ್ಟಿವೆ. ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದು ಯಶಸ್ಸು ಸಾಧಿಸಿದ್ದಾರೆ. ಧನಂಜಯ ಕುಮಾರ್ ,ಡಿ.ವಿ.ಸದಾನಂದ ಗೌಡ ಅವರು ಹಿಂದಿನ ಬಿಜೆಪಿ ಎಂ.ಪಿ.ಗಳು.
ಶಾಸಕರ ಕೊಡುಗೆ:
2018ರ ವಿಧಾನಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿರುವುದೂ ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ. ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಗಣನೀಯವಾಗಿ ಮತವೃದ್ಧಿ ಮಾಡಿಕೊಂಡಿರುವುದೂ ಗಮನಾರ್ಹ.