ಬಂಟ್ವಾಳ: ತೋಟವೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಅಡಿಕೆಯನ್ನು ಕದ್ದೊಯ್ದ ಘಟನೆ ಚೇಳೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಿಶನ್ ರೈ ಎಂಬವರ ತೋಟದ ಮನೆಯಲ್ಲಿ ಬೀಗ ಮುರಿದು ನುಗ್ಗಿದ ಕಳ್ಳಲು ಅಲ್ಲಿ ಸುಲಿದಿಟ್ಟಿದ್ದ 338 ಕೆ.ಜಿ. ಒಣ ಅಡಿಕೆಯನ್ನು ಹೊತ್ತೊಯ್ದಿದ್ದಾರೆ. ಇದರ ಮೌಲ್ಯ ಸುಮಾರು 49 ಸಾವಿರ ಎಂದು ಅಂದಾಜಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.