ಕಲ್ಲಡ್ಕ

ಕಲ್ಲಡ್ಕದ ವಸ್ತುಸಂಗ್ರಹಾಲಯ ಮೂಲಕ ಗಮನ ಸೆಳೆದಿರುವ ಯಾಸೀರ್ ಅವರಿಗೆ ಆರ್ಯಭಟ ಪ್ರಶಸ್ತಿ

ಕಲ್ಲಡ್ಕದ ಯುವ ಉದ್ಯಮಿ, ಹಳೆಯ ವಸ್ತು ಸಂಗ್ರಹಾಲಯದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಯಾಸೀರ್ ಅವರು ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನದ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿರಿ

ರಾಜ್ಯದ ಕೆಲವೇ ಕೆಲವು ನೋಟು, ನಾಣ್ಯ ಸಹಿತ ಕರೆನ್ಸಿ ಸಂಗ್ರಾಹಕರಲ್ಲಿ ಯಾಸೀರ್ ಒಬ್ಬರು. ದೀವಟಿಗೆಯಿಂದ ಹಿಡಿದು, ಪಾತ್ರೆ ಪಗಡಗಳು ಅಷ್ಟೇ ಏಕೆ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳಿಂದ ಹಿಡಿದು ಸ್ಟ್ಯಾಂಪುಗಳು ಹೀಗೆ ಅವರ ಸಂಗ್ರಹ ವೈವಿಧ್ಯ ಅಪಾರ. ಲೋಕಲ್ ಸಾಫ್ಟ್ ಡ್ರಿಂಕ್ ಬಾಟಲಿಗಳು ಎನಿಂದ ಝಡ್ ವರೆಗೆ, ಹಳೆದ ದಿನಬಳಕೆಯ ವಸ್ತುಗಳಿಂದ ಹೊಸ ವಸ್ತುಗಳವರೆಗೆ ಯಾಸೀರ್ ಸಂಗ್ರಹ ನಡೆಸಿದ್ದಾರೆ.

ಎಲ್ಲರೂ ನೋಟು, ನಾಣ್ಯಗಳನ್ನು ವ್ಯವಹಾರಕ್ಕಾಗಿ ಗಮನಿಸಿದರೆ, ಯಾಸೀರ್ ಅವುಗಳಲ್ಲಿ ಬೇರೆಯದ್ದನ್ನೇ ಕಾಣುತ್ತಾರೆ. ಅವುಗಳ ಸೀರಿಯಲ್ ನಂಬ್ರದಿಂದ ಸಹಿವರೆಗೆ ಎಲ್ಲವೂ ಸಂಗ್ರಾಹ್ಯದ ವಿಚಾರಗಳಾಗಿರುತ್ತವೆ. ಯುವ ಉದ್ಯಮಿ ಯಾಸೀರ್ ಕಳೆದ 16 ವರ್ಷಗಳಿಂದ ಕಲ್ಲಡ್ಕದ ತಮ್ಮ ಮನೆಯಲ್ಲಿ ವಸ್ತುಸಂಗ್ರಹ ಮಾಡಿಕೊಂಡು ಬಂದಿದ್ದಾರೆ. ಸ್ನೇಹಿತರ ಸಹಕಾರದಿಂದ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಮೌರ್ಯ, ಅಲುಪ, ಗಂಗ, ಕದಂಬ, ಪಲ್ಲವ, ಚೋಳ, ಕೆಳದಿ, ಟಿಪ್ಪು, ಮೈಸೂರಿನ ಒಡೆಯರು, ಮೊಘಲ್ ಹೀಗೆ ರಾಜಮಹಾರಾಜರ ಕಾಲದಿಂದ ಇತ್ತೀಚಿಗಿನವೆಗಿನ ನಾಣ್ಯ, ನೋಟು, ಪರಿಕರಗಳು, ಸ್ಟ್ಯಾಂಪ್, ವೃತ್ತಪತ್ರಿಕೆಗಳ ಸಂಗ್ರಹ. ಅರ್ಧ ಆಣೆಯಿಂದ 10 ರೂವರೆಗಿನ ನಾಣ್ಯ, 1ರಿಂದ 2 ಸಾವಿರದವರೆಗಿನ ನೋಟುಗಳು, ಕರ್ನಾಟಕದ ಮುಖ್ಯಮಂತ್ರಿ, ದೇಶದ ಪ್ರಧಾನಿಗಳು, ಅಮೇರಿಕ, ಭಾರತದ ಅಧ್ಯಕ್ಷರ ಸಹಿತ ಗಣ್ಯರ ಜನನ ದಿನಾಂಕ, ತಿಂಗಳು, ವರ್ಷ ಇವುಗಳನ್ನು ತಿಳಿಸುವ 10 ರೂ ಮುಖಬೆಲೆಯ ನೋಟುಗಳು, ದೇಶ, ವಿದೇಶಗಳ ಪ್ಲಾಸ್ಟಿಕ್ ನೋಟುಗಳು, ನಾಣ್ಯಗಳು ಇಲ್ಲಿವೆ. ಕಣ್ಣಿಗೆ ಹಾಕುವ ಮಸಿ ತುಂಬಿಸುವ ಕರಂಡೆ, ಬ್ರಿಟಿಷರು ಜೇತು ತುಂಬಿಸುತ್ತಿದ್ದ ಮಣ್ಣಿನ ಹಂಡೆ, ಎನಿಂದ ಝಡ್ ವರೆಗಿನ ಅಕ್ಷರಗಳ ಆರಂಭಗೊಳ್ಳುವ ಬಾಟಲಿಗಳು.. ಹೀಗೆ ಯಾಸೀರ್ ಸಂಗ್ರಹದಲ್ಲಿ ಒಂದೆರಡಲ್ಲ, ಸಾವಿರಕ್ಕೂ ಅಧಿಕ ವಸ್ತುಗಳಿವೆ.

2016 ಓಮನ್ ದೇಶದ ತ್ರಿಡಿ ನೋಟು, 879 ನಾಣ್ಯಗಳಿಂದ ಕರ್ನಾಟಕ, 1020 ನಾಣ್ಯಗಳಿಂದ ಭಾರತದ ಚಿತ್ರ, ದೇವಸ್ಥಾನಗಳ ಪ್ರಸಾದ ಚೀಲಗಳು ಹೀಗೆ ಯಾಸೀರ್ ವಸ್ತು ಸಂಗ್ರಾಹಕರ ಪೈಕಿ ಭಿನ್ನವಾಗಿ ನಿಲ್ಲುತ್ತಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts