ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಉರಿಸೆಖೆ, ಮೋಡ ಕವಿದ ವಾತಾವರಣ ಇದ್ದರೆ, ರಾತ್ರಿಯ ವೇಳೆ ಬೆಳ್ತಂಗಡಿ ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ಕೆಲ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಆದರೆ ಹೆಚ್ಚಿನ ಭಾಗಗಳಲ್ಲಿ ಗುಡುಗು, ಮಿಂಚಿನ ಪ್ರದರ್ಶನವಷ್ಟೇ ಆಗಿದ್ದು, ಸೆಖೆ ಮತ್ತಷ್ಟು ಹೆಚ್ಚಾಗಿದೆ.
ರಾತ್ರಿ ಸುಮಾರು 8ಗಂಟೆಗೆ ಮಿಂಚು, ಗುಡುಗು ಸಹಿತ ಉಜಿರೆ, ಕಾಶಿಬೆಟ್ಟು, ಬೆಳ್ತಂಗಡಿ, ಧರ್ಮಸ್ಥಳ, ಮುಂಡಾಜೆ, ಕಾನರ್ಪ, ಗೇರುಕಟ್ಟೆ, ಹಲೇಜಿ, ಗುರಿಪಳ್ಳ, ಸತ್ಯನಪಲ್ಕೆ, ಸೇರಿದಂತೆ ಹಲವೆಡೆ ಮಳೆ ತಂಪೆರೆದಿದೆ. ಇದರಿಂದಾಗಿ ವ್ಯತ್ಯಯಗೊಂಡಿದೆ.
ಬಂಟ್ವಾಳ ತಾಲೂಕಿನ ಕೆಲವೆಡೆ ಶನಿವಾರ ಸಂಜೆಯ ಬಳಿಕ ಗುಡುಗು,ಸಿಡಿಲಿನೊಂದಿಗೆ ಮಳೆ ಸುರಿದು ತಂಪೆರೆದರೆ ಉಳಿದೆಡೆ ಕೇವಲ ಗುಡುಗಿನ ಸದ್ದು ಕೇಳಿತು. ಬಿ.ಸಿ.ರೋಡ್ ಸುತ್ತಮುತ್ತ ಕೆಲ ಹನಿ ಮಳೆ ಸುರಿದಿದ್ದು, ಗುಡುಗಿನ ಅಬ್ಬರ ಜೋರಾಗಿತ್ತು. ಮಾಣಿ, ಸರಪಾಡಿ ಮತ್ತಿತರ ಕಡೆಗಳಲ್ಲಿ ಮಳೆಯಾಗಿದ್ದರೆ, ಹಲವೆಡೆ ಹನಿ ಮಳೆಯಷ್ಟೇ ಸುರಿಯಿತು.
ಬೆಳ್ತಂಗಡಿಯ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಕಿಂಡಿ ಅಣೆಕಟ್ಟು ಕಟ್ಟಿದ ಕಾರಣ ತೀರ್ಥ ಮತ್ತು ಅಭಿಷೇಕಕ್ಕೆ ನೀರಿದೆ. ತೀರ್ಥ ಗುಂಡಿಯಲ್ಲೂ ನಾಲ್ಕು ಗುಂಡಿಗಳಲ್ಲಿ ನೀರು ಕಡಿಮೆ ಆಗಿದೆ. ಅಸ್ವಲ್ಪ ದಿನಗಳ ಕಾಲ ಸಾಕಾಗುತ್ತೆ. ನೀರಿನ ಹರಿವು ಕಡಿಯಾಗುತ್ತಾ ಇದೆ. ನೇತ್ರಾವತಿ ನದಿಯ ಪೂರಕ ನದಿಗಳಲ್ಲಿ ನೀರು ಇಂಗುತ್ತಿದೆ. ಉಪನದಿಗಳ ನೀರು ಇಂಗುತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ಉದ್ಭವವಾಗಿದೆ.
ಡಾ. ಹೆಗ್ಗಡೆ ಮನವಿ:
ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಅರಣ್ಯನಾಶ, ಸಕಲೇಶಪುರದ ಬಳಿ ಪಶ್ಚಿಮ ಘಟ್ಟ ಅರಣ್ಯದ ನಾಶ, ಉಪನದಿ ಹೇಮಾವತಿಯನ್ನು ಬರಡುಗೊಳಿಸಿದ್ದು, ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದಾರೆ. ಮಳೆ ಶುರುವಾಗುವವರೆಗೆ ಪ್ರವಾಸಿಗರು ತಮ್ಮ ಯಾತ್ರೆಯನ್ನು ಮುಂದೂಡಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.