ಅಂತರ್ ರಾಷ್ಟ್ರೀಯ ಹೋಲಿ ಕುರ್‌ಆನ್ ಅವಾರ್ಡ್ ರಂಝಾನ್ ಪ್ರಭಾಷಣದಲ್ಲಿ ದುಬೈ ಜಿದ್ದಾಫ್ ಅಲ್ ವಸಲ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು, ಇರಾ ಗ್ರಾಮದ ಕುಕ್ಕಾಜೆ ನಿವಾಸಿ ಯೂಸುಫ್ ನಬ್ಹಾನಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಪ್ರಶಸ್ತಿ ವಿತರಿಸಿದರು.
ಈ ಸಂದರ್ಭ ಬಾಯಾರ್ ತಂಙಳ್, ತ್ವಾಹಾ ತಂಙಳ್, ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಮೊದಲಾದವರು ಉಪಸ್ಥಿತರಿದ್ದರು. ಯೂಸುಫ್ ನಬ್ಹಾನಿ ಅವರು ಕಳೆದ ೧೫ ವರ್ಷಗಳಿಂದ ಕಾಸರಗೋಡು ದೇಳಿಯಲ್ಲಿರುವ ಜಾಮಿಯಾ ಸಅದಿಯಾ ವಿದ್ಯಾಸಂಸ್ಥೆಯ ಲೈಬ್ರರಿಗೆ ಮೌಲ್ಯಯುತ ಅರಬಿಕ್ ಇಸ್ಲಾಮಿಕ್ ಗ್ರಂಥಗಳನ್ನು ಪ್ರಾಯೋಜಕರ ಮೂಲಕ ಉಚಿತವಾಗಿ ನೀಡುತ್ತಾ ಬರುತ್ತಿದ್ದಾರೆ. ದುಬೈಯ ಜಾಮಿಯಾ ಸಅದಿಯಾ ಅರಬಿಯಾ ಇಂಡಿಯನ್ ಸೆಂಟರ್ ಯೂಸುಫ್ ನಬ್ಹಾನಿ ಅವರಿಗೆ ಈ ವಿಶೇಷ ಪ್ರಶಸ್ತಿಯನ್ನು ಪ್ರಾಯೋಜಿಸಿತು.