ವಿವಾಹ ಕಾರ್ಯಕ್ರಮಕ್ಕೆ ಪೂರ್ವವಾಗಿ ನಡೆಸಲಾಗುವ ಮದರಂಗಿ ಶಾಸ್ತ್ರ ಕಾರ್ಯಕ್ರಮಕ್ಕೆ ಹಳ್ಳಿ ಬದುಕಿನ ಸ್ಪರ್ಶ ನೀಡುವ ಮೂಲಕ ಗಮನ ಸೆಳೆದಿದೆ.
ತುಳು ನಾಡಿನ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಮಾದರಿಯಾಗಿದ್ದಾರೆ. ಹಳ್ಳಿ ಬದುಕನ್ನು ನೆನೆಪಿಸುವ ಹಳೆಯ ಸಂಪ್ರದಾಯ, ಪದ್ಧತಿ, ಜೀವನ ಕ್ರಮ ಮತ್ತಿತರ ಅಂಶಗಳು ಇಲ್ಲಿ ಗಮನ ಸೆಳೆಯಿತು.
ಜನಸ್ನೇಹಿಯಾಗಿ ಕಳೆದ ಹಲವು ವರ್ಷಗಳಿಂದ ಬಂಟ್ವಾಳ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನವೀನ್ ಓರ್ವ ಸರಳ, ಸಜ್ಜನಿಕೆಯ ಅಧಿಕಾರಿ. ಕಾರ್ಯಕ್ಷೇತ್ರದಲ್ಲೂ ಹೊಸತನದ ಆಲೋಚನೆ ಮತ್ತು ಚಿಂತನೆಯನ್ನು ತೊಡಗಿಸಿಕೊಂಡಿರುವ ನವೀನ್ ಅವರು, ಆಡಂಬರ, ಐಷಾರಾಮಿ ಮದುವೆಯ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ.
ಅನ್ವಿತಾ ಅವರೊಂದಿಗೆ ದಿನಾಂಕ 19ರಂದು ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿರುವರು.
✒ಸದಾ ಬಿ ಸಿ ರೋಡು