ಕುಂದಗೋಳ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು ಬಿರುಸಿನ ಪ್ರಚಾರ ನಡೆಯುತ್ತಿದೆ .ಈ ಹಿನ್ನಲೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಸಂಶೀ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಿರೇನರ್ತಿ ಗ್ರಾಮಪಂಚಾಯತ್ ಸುತ್ತಮುತ್ತ ಮತಯಾಚನೆಯನ್ನು ನಡೆಸಿದರು.
ಮನೆ ಮನೆ ಅಂಗಡಿ ಅಂಗಡಿಗಳಿಗೆ ತೆರಳಿ ಮತಯಾಚನೆ ನಡೆಸಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇನ್ನು ಈ ಸಂದರ್ಭದಲ್ಲಿ ರೈ ಜೊತೆ ಕುಂದಗೋಳ ಕ್ಷೇತ್ರದ ಸಂಶೀ ಜಿಲ್ಲಾಪಂಚಾಯತ್ ವೀಕ್ಷಕರಾದ ಚಂದ್ರಶೇಖರ್ ರೆಡ್ಡಿ , ಗ್ರಾಮಪಂಚಾಯತ್ ಅಧ್ಯಕ್ಷರಾದ ಸಿದ್ದಪ್ಪ ಸದಸ್ಯರಾದ ಕಲಂದರ್ , ರಾಜೇಶ್, ಬಾಬು ಪಕ್ಷದ ಪ್ರಮುಖರಾದ ಸುರೇಶ್ , ವಿಠಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…