ಬಂಟ್ವಾಳ: ಬುಧವಾರ ಮಧ್ಯಾಹ್ನ 2.30ಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಜಿಪಂ ಉಪಕಾರ್ಯದರ್ಶಿ ಮಹೇಶ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ಈ ಕುರಿತು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪ್ರಕಟಣೆ ನೀಡಿದ್ದು, ಸಭೆಯಲ್ಲಿ ಎಲ್ಲ ಗ್ರಾಪಂಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಲಾಖಾಧಿಕಾರಿಗಳು ಭಾಗವಹಿಸಲಿರುವರು.
ನರೇಗಾ, ಅಭಿವೃದ್ಧಿ ಅನುದಾನ, 14ನೇ ಹಣಕಾಸು, ಸ್ವಂತ ಅನುದಾನದ ಕ್ರಿಯಾಯೋಜನೆ, ಗ್ರಾಪಂನಲ್ಲಿರುವ ಕುಡಿಯುವ ನೀರಿನ ಸ್ಥಾವರ, ಅನುಪಯುಕ್ತ ಕೊಳವೆ ಬಾವಿಯ ವಿವರ, ಎಸ್.ಸಿ, ಎಸ್.ಟಿ. ಶೇ.25 ನಿಧಿ ಬಳಕೆ, ಅಂಗವಿಕಲರಿಗೆ ಇರುವ ನಿಧಿ ಬಳಕೆ, ನೀರಿನ ತೆರಿಗೆ ವಸೂಲಾತಿ, ಮೀಟರಿಂಗ್, ಘನತ್ಯಾಜ್ಯ ವಿಲೇವಾರಿ, ಎನ್.ಆರ್.ಎಲ್.ಎಂ, ಗ್ರಾಮವಿಕಾಸ ಮತ್ತು ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆ ಪ್ರಗತಿ, ವಸತಿ ಯೋಜನೆ, ರಾಜೀವ ಗಾಂಧಿ ಸಶಕ್ತೀಕರಣ ಯೋಜನೆ, ಚೈತನ್ಯ ಯೋಜನೆ, ರಾಷ್ಟ್ರೀಯ ಜೈವಾನಿಲ ಯೋಜನೆ ಸಹಿತ ಹಲವು ವಿಚಾರಗಳಿಗೆ ಸಂಬಂಧಿ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.