ಬಂಟ್ವಾಳ

ಸರಪಾಡಿ ಕಾಲನಿಯಲ್ಲಿ ಎಂ.ಫ್ರೆಂಡ್ಸ್ ಇಫ್ತಾರ್

ಬಂಟ್ವಾಳ: ತಾಲೂಕಿನ ಸರಪಾಡಿ ಸಮೀಪದ ಕುಗ್ರಾಮ ಮೀಯಾರ್ ಪಳಿಕೆ ಎಂಬಲ್ಲಿ ಮಂಗಳೂರಿನ ಸೇವಾಸಂಸ್ಥೆ ಎಂ.ಫ್ರೆಂಡ್ಸ್ ಅಲ್ಲಿನ ಕಾಲನಿ ನಿವಾಸಿಗಳೊಂದಿಗೆ ಶನಿವಾರ ವಿಶಿಷ್ಟ ರೀತಿಯಲ್ಲಿ ಇಫ್ತಾರ್ ಆಚರಿಸಿತು.
ಮೀಯಾರ್ ಪಳಿಕೆ ನೂರುಲ್ ಉಲೂಮ್ ಮದ್ರಸ ವಠಾರದಲ್ಲಿ ಮೀಯಾರ್ ಪಳಿಕೆ ಹಾಗೂ ನೇಲ್ಯ ಪಳಿಕೆಯ ಕ್ವಾಟ್ರಸ್ ಕುಟುಂಬಿಕರನ್ನು ಸೇರಿಸಿ ಆಚರಿಸಿದ ಇಫ್ತಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ವಹಿಸಿದರು. ತುಂಬೆ ಬಿ.ಎ. ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಿ.ಬಿ.ಅಬ್ದುಲ್ ರಹಿಮಾನ್ ರಂಝಾನ್ ಸಂದೇಶ ನೀಡಿದರು. ನೂರುಲ್ ಉಲೂಮ್ ಮಸೀದಿ ಇಮಾಮ್ ಅಶ್ರಫ್ ಮುಸ್ಲಿಯಾರ್ ದುಆ ನೆರವೇರಿಸಿದರು. ಎಂ.ಫ್ರೆಂಡ್ಸ್ ಟ್ರಸ್ಟಿ ಅಶ್ರಫ್ ಅಬ್ಬಾಸ್ ಮಂಜೇಶ್ವರ, ನೂರಲ್ ಉಲೂಮ್ ಮಸೀದಿ ಸ್ಥಾಪಕಾಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಅಧ್ಯಕ್ಷ ಇಸ್ಮಾಯಿಲ್ ಮುಖ್ಯ ಅತಿಥಿಯಾಗಿದ್ದರು. ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಟ್ರಸ್ಟಿ ಅಹ್ಮದ್ ಮುಸ್ತಫಾ ಗೋಳ್ತಮಜಲು ವಂದಿಸಿದರು.
ಮೀಯಾರ್ ಪಳಿಕೆ ಹಾಗೂ ನೇಲ್ಯ ಪಳಿಕೆ ಕಾಲನಿಯ ಬಡ ಕುಟುಂಬಿಕರಿಗೆ ಒಂದು ತಿಂಗಳ ರಂಝಾನ್ ರೇಶನ್ ಕಿಟ್, ಜುಬ್ಬ ಮಕ್ಕನೆ, ವಸ್ತ್ರ ವಿತರಿಸಲಾಯಿತು. ಇತ್ತೀಚೆಗೆ ನಮ್ಮನ್ನಗಲಿದ ಹಜಾಜ್ ಸಂಸ್ಥೆ ಸ್ಥಾಪಕರಾದ ಅಬ್ದುಲ್ ಖಾದರ್ ಹಾಜಿ ಸ್ಮರಣಾರ್ಥ ಅವರ ಕುಟುಂಬಿಕರು ಮಸೀದಿಯಲ್ಲಿ ಒಂದು ತಿಂಗಳ ಇಫ್ತಾರ್ ಪ್ರಾಯೋಜಕತ್ವ ನೀಡಿದರು. ಎಂ.ಫ್ರೆಂಡ್ಸ್ ನ ಡಾ.ಮುಬಶ್ಶಿರ್, ಸಫ್ವಾನ್ ವಿಟ್ಲ, ಆರಿಫ್ ಪಡುಬಿದ್ರಿ, ಕಲಂದರ್ ಪರ್ತಿಪಾಡಿ, ಇರ್ಶಾದ್ ವೇಣೂರು, ಹನೀಫ್ ಕುದ್ದುಪದವು, ಝುಬೈರ್ ವಿಟ್ಲ, ಮುಸ್ತಫಾ ಇರುವೈಲ್, ಹಾರಿಸ್ ಕಾನತ್ತಡ್ಕ, ಆರಿಫ್ ಬೆಳ್ಳಾರೆ, ಅನ್ಸಾರ್ ಬೆಳ್ಳಾರೆ, ಡಿ.ಎಂ.ರಶೀದ್ ಉಕ್ಕುಡ, ಆಶಿಕ್ ಕುಕ್ಕಾಜೆ, ಅಬೂಬಕರ್ ಪುತ್ತ ಉಪ್ಪಿನಂಗಡಿ, ಮಹಮ್ಮದ್ ರಿಯಾಝ್ ಪುತ್ತೂರು, ರಫೀಕ್ ನೆಟ್ಲ, ರಫೀಕ್ ಕಲ್ಲಡ್ಕ, ಜಾಸಿಮ್, ಬಶೀರ್ ಮೀಯಾರ್ ಪಳಿಕೆ ಉಪಸ್ಥಿತರಿದ್ದರು.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts