ಕಲ್ಲಡ್ಕ

ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿನ್ನು ಎರಡು ಸಭಾಂಗಣ ಸೇವೆಗೆ ಲಭ್ಯ

  • ಮೇ.13ರಂದು ನೂತನ ಸಭಾಂಗಣ ಉದ್ಘಾಟಿಸಲಿರುವ ಶ್ರೀ ರಾಘವೇಶ್ವರ ಸ್ವಾಮೀಜಿ

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಸ್ಥಾನಂ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟ ಕಲ್ಲಡ್ಕ ಗೇರುಕಟ್ಟೆಯಲ್ಲಿರುವ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಸೋಮವಾರ ಮೇ.13ರಂದು ಶ್ರೀ ಕ್ಷೇತ್ರದ ನೂತನ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು

ಇದರಿಂದ ಶ್ರೀ ಉಮಾಶಿವ ಕ್ಷೇತ್ರದಲ್ಲಿನ್ನು ಎರಡು ಸಭಾಂಗಣ ಲಭ್ಯವಾದಂತಾಗುತ್ತದೆ. ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರ ಜೀರ್ಣೋದ್ಧಾರಗೊಂಡು ಆರು ವರ್ಷಗಳು ಸಂದಿವೆ. ಇಲ್ಲಿನ ಸನ್ಮತಿ ಹೆಸರಿನ ವಿಶಾಲ ಸಭಾಂಗಣದಲ್ಲಿ ಮಂಗಲ ಕಾರ್ಯಗಳು ಮತ್ತು ಅಪರ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಇದೀಗ ಅಪರ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಭಾಭವನವೊಂದನ್ನು ನಿರ್ಮಿಸಲಾಗಿದೆ.  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ 13ರಂದು ಲೋಕಾರ್ಪಣೆಗೊಳ್ಳಲಿದ್ದು, ಭಕ್ತರ ಅನುಕೂಲಕ್ಕೆ ಸಜ್ಜಾಗಿದೆ. ಇದೀಗ ಕ್ಷೇತ್ರದಲ್ಲಿ ಶುಭ ಮತ್ತು ಅಪರ ಕಾರ್ಯಗಳಿಗೆ ಎರಡು ಪ್ರತ್ಯೇಕ ಸಭಾಭವನಗಳನ್ನು ಭಕ್ತರ ಬೇಡಿಕೆಗೆ ಅನುಸಾರವಾಗಿ ನಿರ್ಮಿಸಿದಂತಾಗುತ್ತಿದ್ದು, ಅವಶ್ಯಕತೆ ಇದ್ದವರು 9480237644 ಮತ್ತು 9449068480 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಕ್ಷೇತ್ರದ ಸೇವಾ ಸಮಿತಿ ತಿಳಿಸಿದೆ.  ಧನಸಹಾಯ ಮಾಡಲಿಚ್ಛಿಸುವ ಭಕ್ತಾದಿಗಳು ಕರ್ಣಾಟಕ ಬ್ಯಾಂಕ್ ಖಾತೆ ನಂ. ಶ್ರೀ ಉಮಾಶಿವ ಕ್ಷೇತ್ರ 0712500101201001 IFSC: KARB0000071 Bantwal Muda  ಇದಕ್ಕೆ ಕಳುಹಿಸಬೇಕಾಗಿ ವಿನಂತಿಸಿದ್ದಾರೆ.

ಕಾರ್ಯಕ್ರಮಗಳ ವಿವರ ಹೀಗಿದೆ:

ಜಾಹೀರಾತು

ಬೆಳಗ್ಗೆ ಗಂಟೆ ೦೮ಕ್ಕೆ : ವೃಷಭ ಲಗ್ನ ಸುಮುಹೂರ್ತದಲ್ಲಿ ಪ್ರವೇಶ, .೩೦ಕ್ಕೆ ಗಣಪತಿ ಹವನ, .೩೦ಕ್ಕೆ ಶ್ರೀ ದೇವರಿಗೆ ಏಕಾದಶರುದ್ರ ಶಿವಪೂಜೆ, .೩೦ಕ್ಕೆ ಪುರುಷಸೂಕ್ತ ಹವನ, ೧೧.೩೦ಕ್ಕೆ ಪೂರ್ಣಾಹುತಿ. ಮಧ್ಯಾಹ್ನ ಗಂಟೆ ೧೨ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ೧೨.೩೦ಕ್ಕೆ ಅನ್ನಸಂತರ್ಪಣೆ ಮಧ್ಯಾಹ್ನ ೩ಕ್ಕೆ ಶ್ರೀ ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಗಮನ. ಮಧ್ಯಾಹ್ನ .೧೫ಕ್ಕೆ ದಿವ್ಯ ಸಾನಿಧ್ಯ ಮತ್ತು ಮಾರ್ಗದರ್ಶನ, ಆಶೀರ್ವಚನ, ನೂತನ ಭವನದ ಲೋಕಾರ್ಪಣೆ, ಬಳಿಕ .೩೦ಕ್ಕೆ ಸಭಾ ಕಾರ್ಯಕ್ರಮ. ಉಪಸ್ಥಿತಿ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪ್ರಮುಖರಾದ ಡಾ. ಕೆ.ಪ್ರಭಾಕರ ಭಟ್, ಎಸ್.ಆರ್.ಸತೀಶ್ಚಂದ್ರ, ಎಲ್.ಎನ್.ಕುಡೂರು, ಸಂಜೆ 4ಕ್ಕೆ ಕವಿತಾ ಅಡೂರು ಇವರಿಂದ ಡಿವಿಜಿ ಅವರ ಕಗ್ಗದ ಬೆಳಕು ವ್ಯಾಖ್ಯಾನ ಇರಲಿದೆ.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ಸಹಿತ ದ.ಕ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಸುದ್ದಿ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ