ಬಂಟ್ವಾಳ

ಕಿಡಿಗೇಡಿಗಳಿಗೆ ಪಾಠ ಕಲಿಸಲು ಬಂದಿದೆ ರಾಣಿ ಅಬ್ಬಕ್ಕ ಪಡೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ರಚಿಸಲಾದ ರಾಣಿ ಅಬ್ಬಕ್ಕ ಪಡೆಯ ತಾಲೂಕು ಘಟಕ ಸೋಮವಾರ ಉದ್ಘಾಟನೆಗೊಂಡಿತು. ಏನು ಈ ಪಡೆ, ಇಲ್ಲಿದೆ ವಿವರ.

  • ಪ್ರತಿ ತಾಲೂಕಿಗೆ ಎರಡು ತಂಡಗಳು ಇರುತ್ತವೆ. ಪ್ರತಿ ತಂಡದಲ್ಲಿ ಆರು ಮಂದಿ ಮಹಿಳಾ ಸಿಬ್ಬಂದಿ ಇರುತ್ತಾರೆ.
  • ತಾಲೂಕು ಮಟ್ಟದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಮೇಲ್ವಿಚಾರಕರು. ಸಹಾಯಕ ಪೊಲೀಸ್‌ ಅಧೀಕ್ಷಕರು ಮಾರ್ಗದರ್ಶಕರು.
  • ರಾಣಿ ಅಬ್ಬಕ್ಕ ಪಡೆಯ ಸಿಬ್ಬಂದಿ ವಿಶೇಷ ಸಮವಸ್ತ್ರ ಹೊಂದಿರುತ್ತಾರೆ. ನೀಲಿ ಬಣ್ಣದ ಟೀ-ಶರ್ಟ್‌ ಮತ್ತು ಡಾಂಗ್ರಿ ಪ್ಯಾಂಟ್‌, ಕಮಾಂಡೋ ಶೂ ಮತ್ತು ಟೋಪಿ ಸಿಬ್ಬಂಧಿಯವರ ಸಮವಸ್ತ್ರವಾಗಿರುತ್ತದೆ.
  • ಪ್ರತೀ ತಾಲೂಕು ಮಟ್ಟದ ತಂಡಗಳ ರಾಣಿ ಅಬ್ಬಕ್ಕ ಪಹರೆ ಪಡೆ ವಾಹನದಲ್ಲಿ ಗಸ್ತು ಮಾಡುತ್ತಾ ಕರ್ತವ್ಯ ನಿರ್ವಹಿಸುತ್ತಾರೆ.
  • ಅಬ್ಬಕ್ಕ ಪಡೆ ತಂಡವು ಹೆಣ್ಣುಮಕ್ಕಳು ಮತ್ತು ಮಹಿಳೆಯವರಿಗೆ ಸ್ವರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತದೆ.
  • ಹಗಲು ಹೊತ್ತಿನಲ್ಲಿ ಶಾಲಾ ಕಾಲೇಜುಗಳ ಹತ್ತಿರ ರೌಂಡ್ಸ್‌ ಕರ್ತವ್ಯ ನಿರ್ವಹಿಸಿ ಬಾಲಕಿಯರಿಗೆ ರಕ್ಷಣೆ ನೀಡುತ್ತದೆ.
  • ಸಾಯಂಕಾಲದ ವೇಳೆ ವಿಧ್ಯಾರ್ಥಿಗಳು ತಂಗುವ ಪಿ.ಜಿಗಳು ಹಾಸ್ಟೇಲ್‌ಗಳ ಹತ್ತಿರ ಗಸ್ತು ಕರ್ತವ್ಯ ಮಾಡುವುದು.
  • ಕೋಟ್ಪಾ ಕಾಯ್ದೆಯನ್ವಯ ಕೇಸುಗಳನ್ನು ದಾಖಲಿಸುವುದು
  • ಬಸ್‌ಸ್ಟ್ಯಾಂಡ್‌ಗಳು, ರೈಲ್ವೇ ನಿಲ್ದಾಣಗಳು, ಪಾರ್ಕ್‌, ದೇವಸ್ಥಾನ, ಮಾರುಕಟ್ಟೆ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳ ಹತ್ತಿರ ಗಸ್ತು ತಿರುಗುವುದು
  • ಕಿಡಿಗೇಡಿಗಳು ಮತ್ತು ಹೆಣ್ಣುಮಕ್ಕಳನ್ನು ಚುಡಾಯಿಸುವವರ ಮೇಲೆ ಕಣ್ಣಿಟ್ಟು ಅಂತವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವುದು.
  • ಜಾತ್ರೆ, ಉತ್ಸವಗಳು, ಪ್ರತಿಭಟನೆ ಮತ್ತು ಮೆರವಣಿಗೆಗಳ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಈ ಪಡೆ ಮಾಡುತ್ತದೆ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ