ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಮುಖ ವ್ಯಾಯಾಮ ಶಾಲೆಯಾದ ಬಿ.ಸಿ.ರೋಡಿನ ಶ್ರೀ ರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆ ವತಿಯಿಂದದ ತೃತೀಯ ವರ್ಷದ ರಾಜ್ಯ ಮಟ್ಟದ ಗ್ರಿಪ್ ಮಾದರಿಯ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಕೂಟ ಭಾನುವಾರ ಬಿ.ಸಿ.ರೋಡಿನಲ್ಲಿ ನಡೆಯಿತು. ಇದರಲ್ಲಿ ಕಾಪು ಕೈಪುಂಜಾಲುವಿನ ಜೈವೀರಮಾರುತಿ ತಂಡ ವಿಜಯಶಾಲಿಯಾಗಿದೆ.
ಫ್ರೆಂಡ್ಸ್ ಕಾಡೆಟ್ಟು ರನ್ನರ್ಸ್, ಆಂಜನೇಯ ಕಣ್ವತೀರ್ಥ, ನಮ್ಮ ಜವನೆರ್ ಮಂಜನಕಟ್ಟೆ ಮೂರನೇಮತ್ತು ನಾಲ್ಕನೇಸ್ಥಾನ ಪಡೆದುಕೊಂಡಿದೆ.
ಓಡಿಲ್ನಾಳದ ಭಾರ್ಗವ ಫ್ರೆಂಡ್ಸ್ 5ನೇ ಸ್ಥಾನ, ಯುವ ಸ್ಫೂರ್ತಿ ಬೆಳ್ಳೆ 6ನೇ ಸ್ಥಾನಿಯಾಗಿದೆ. 7ನೇ ಸ್ಥಾನವನ್ನು ವೀರಾಂಜನೇಯ ಬೀರಿ, 8ನೇಸ್ಥಾನವನ್ನು ಚೇಳೂರಿನ ಅನುಗ್ರಹ ತಂಡ ಗಳಿಸಿದೆ.
ಸಮಾಧಾನಕರ ಬಹುಮಾನವನ್ನು ಚಿಕ್ಕಯ್ಯನಮಠ ಫ್ರೆಂಡ್ಸ್, ನಮ ಜವನೆರ್ ಮಂಜರಕಟ್ಟೆ ಬಿ ತಂಡ, ಬೆಳ್ಳೆಯ ಯುವ ಸ್ಫೂರ್ತಿ ತಂಡ ಪಡೆದಿದೆ. ಬಂದಾರುವಿನ ಸಾಯಿ ಫ್ರೆಂಡ್ಡ್ಸ್ ಅತ್ಯಂತ ಶಿಸ್ತುಬದ್ಧ ತಂಡ ಎಂಬ ಬಿರುದು ಪಡೆದುಕೊಂಡಿತು.
ಬೆಸ್ಟ್ ಕೋಚ್ ನಿತಿನ್ ಕಣ್ವತೀರ್ಥ, ಬೆಸ್ಟ್ ಹ್ಯಾಂಡ್ ಅಶ್ವಿನ್ ಕಾಡಬೆಟ್ಟು, ಬೆಸ್ಟ್ ವೈಸ್ಟ್ ಅವಿನಾಶ್ ಕೈಪುಂಜಾಲ್ ಪಡೆದುಕೊಂಡರು.
ಭಾರತ ಸೇನೆಯ ಯೋಧರಾದ ಸುಭೇದಾರ್ ಮೇಜರ್ ದಿಲ್‌ಬಾಗ್ ಸಿಂಗ್ ಮಾಲ್‌ಕೀ, ನೈಬ್ ಸುಭೇದಾರ್ ಜಿ.ಕೆ ಶರ್ಮಾ, ಹಾವಲ್ದರ್ ಡಿಕ್ಕಿ.ಸಿ.ಎನ್ ಮಾರಕ್ ಇವರನ್ನು ಸಮ್ಮಾನಿಸಲಾಯಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹಗ್ಗ ಎಳೆಯುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಭ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಯಶ್‌ಪಾಲ್ ಸುವರ್ಣ ಮಲ್ಪೆ, ಮಂಜು ಕೊಳ ಮಲ್ಪೆ, ರಮೇಶ್ ನಾಯ್ಕ್, ಸತೀಶ್ ಭಂಡಾರಿ, ಲೋಕನಾಥ ಶೆಟ್ಟಿ, ಅಭಿಷೇಕ್ ರೈ, ದಿನೇಶ್ ಅಮ್ಟೂರು, ಚಂದಪ್ಪ ಪೂಜಾರಿ, ಮಾಧವ ಸಾಲ್ಯಾನ್, ಜಿ.ಆನಂದ ,ಇಂದ್ರೇಶ್, ವಿದ್ಯಾವತಿ ಪ್ರಮೋದ್ ಕುಮಾರ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.