ಉಜಿರೆ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಸಿದ್ದವನ ಬಳಿ ಶನಿವಾರ ಸಾಯಂಕಾಲ ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದು ಉಜಿರೆ ನಿನ್ನಿಕಲ್ಲು ನಿವಾಸಿ ವಿಘ್ನೇಶ್(21) ಹಾಗೂ ಮಡಂತ್ಯಾರು ನಿವಾಸಿ ಕ್ಷಿತಿಜ್ ಜೈನ್(24) ಮೃತಪಟ್ಟಿದ್ದಾರೆ. ಧರ್ಮಸ್ಥಳದಿಂದ ಉಜಿರೆಗೆ ಬರುತ್ತಿರುವಾಗ ಘಟನೆ ನಡೆದಿದೆ. ಮರ ಬುಡದಿಂದಲೇ ಉರುಳಿ ಬಿದ್ದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇಬ್ಬರೂ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಕೊನೆಯುಸಿರೆಳೆದರು. ಕಾರಿನಲ್ಲಿ ಒಟ್ಟು ನಾಲ್ವರಿದ್ದು, ಸುಶಾಂತ್ ಮತ್ತು ಹರ್ಷಿತ್ ಎಂಬ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.