ಬಹುನಿರೀಕ್ಷಿತ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಕರಾವಳಿಗೆ ಮೊದಲಸ್ಥಾನ ದೊರಕುವುದೇ ಎಂಬ ಕುತೂಹಲ ಕಾದಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಿದ್ಯಾರ್ಥಿಗಳ ಪಾಲಕ-ಪೋಷಕರಿಗೆ ಅಂಕ ಸಹಿತವಾಗಿ ಫಲಿತಾಂಶದ ಸಂದೇಶ ರವಾನೆ ಮಾಡಲಾಗುತ್ತದೆ. ಮಾ.21ರಿಂದ ಎ.4ರ ವರೆಗೆ ನಡೆದ ಎಸೆಸೆಲ್ಸಿ ಪರೀಕ್ಷೆಗೆ 8.41 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಎಲ್ಲ ಪರೀಕ್ಷೆಗಳಲ್ಲೂ ಸರಾಸರಿ 25 ಸಾವಿರ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಫಲಿತಾಂಶವನ್ನು http://kseeb.kar.nic.in/ ನಲ್ಲೂ ಪಡೆಯಲು ಸಾಧ್ಯ. ಬಹುದಾಗಿದೆ. ಬುಧವಾರ ಆಯಾ ಪ್ರೌಢಶಾಲೆಯಲ್ಲಿ ಫಲಿತಾಂಶದ ಸಂಪೂರ್ಣ ವಿವರ ದೊರೆಯಲಿದೆ.