ಪ್ರಮುಖ ಸುದ್ದಿಗಳು

ರಾಜ್ಯದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳ ಉತ್ತಮ ಸಾಧನೆ

ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರಾಜ್ಯದ್ಯಾಂತ ವಿಭಿನ್ನ ಸಾಮರ್ಥ್ಯವುಳ್ಳ ಒಟ್ಟು 3683 ಮಕ್ಕಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 2494 ಮಕ್ಕಳು ಪಾಸ್ ಆಗಿದ್ದು, ಶೇ. 67.71 ಸಾಧನೆಯಾಗಿದೆ. ಕಲಿಕಾ ದೌರ್ಬಲ್ಯ ಹೊಂದಿರುವ ಮಕ್ಕಳು ಡಿಸ್ಲೆಕ್ಸಿಯಾ, ಆಟಿಸಂ, ಸೆರೆಬ್ರಲ್ ಪಾಲಸಿ, ಡೌನ್ ಸಿಂಡ್ರೋಮ್ ಮುಂತಾದ ಸಮಸ್ಯೆಗಳಿಂದ ಹುಟ್ಟಿನಿಂದಲೇ ಬಳಲುತ್ತಿರುತ್ತಾರೆ. ಇವರ ಬುದ್ಧಿಮತ್ತೆ ಗುಣಾಂಕ ಐಕ್ಯೂ ಸಾಮಾನ್ಯ ಮಕ್ಕಳಿಗಿಂತ ಕಡಿಮೆ. ಇಂತಹ ಮಕ್ಕಳಿಗೆ ಬಾಲ್ಯದಿಂದಲೇ ವಿಶೇಷ ತರಬೇತಿ, ಪ್ರೋತ್ಸಾಹ ಬೇಕು. ಇಂಥ ಮಕ್ಕಳ ವೈದ್ಯಕೀಯ ಪರೀಕ್ಷೆ ಹಾಗೂ ಬುದ್ಧಿಮತ್ತೆ ಪರೀಕ್ಷೆಗಳನ್ನು ಮಾಡಿಸಿ ಪ್ರಮಾಣ ಪತ್ರ ಪಡೆಯಬೇಕುಅದನ್ನು ಡಿಡಿಪಿಐ ಕಚೇರಿ ಮೂಲಕ ಎಸ್.ಎಸ್.ಎಲ್.ಸಿ. ಮಂಡಳಿಗೆ ಸಲ್ಲಿಸಿ, ಭಾಷಾ ವಿನಾಯಿತಿ ಪಡೆಯಬಹುದು. ಕಲಿಕಾ ಮಾಧ್ಯಮದ ಭಾಷೆ ಹೊರತು ಪಡಿಸಿ, ಇನ್ನೆರಡು ಭಾಷೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ.

ಜಾಹೀರಾತು

ಇಂಥ ಮಕ್ಕಳಿಗೆ ಕೆಲವು ವಿನಾಯತಿ ಪಡೆಯುವ ಅವಕಾಶವಿರುತ್ತದೆನಿಯಮಾನುಸಾರ ಅಂಥ ವಿಶೇಷ ಸೌಲಭ್ಯವನ್ನು ಶಿಕ್ಷಣ ಮಂಡಳಿಯಿಂದ ಪಡೆಯಲಾಗಿತ್ತು. ಆದರೆಯಾವುದೇ ರೀತಿಯ ಕೀಳರಿಮೆ ಬಾರದಂತೆ ಶಾಲೆಯಲ್ಲಿ ನಿಗಾ ವಹಿಸುವುದು ಬಹಳ ಮುಖ್ಯ ಶಾಲೆಯಲ್ಲಾಗಲಿ, ಸರಕಾರದಿಂದಾಗಲಿ ಇಂಥ ಮಕ್ಕಳಿಗೆ ವಿಶೇಷ ತರಬೇತು ನೀಡುವ ವ್ಯವಸ್ಥೆ ಇಲ್ಲ. ಶಾಲೆಯ ಸಹಕಾರದೊಂದಿಗೆ ಪೋಷಕರ ಪರಿಶ್ರಮದಿಂದ ಮಾತ್ರ ಇಂಥ ಮಕ್ಕಳು ಗುರಿ ತಲುಪಬಹುದು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.