ಕೇರಳದತ್ತ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಎ.ಸಿ.ಕೋಚ್ ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತಾದರೂ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿಹೋಗಿದೆ.
ಮುಂಬೈನಿಂದ ಎರ್ನಾಕುಲಂಗೆ ತೆರಳುತ್ತಿದ್ದ ರೈಲು ತಡರಾತ್ರಿ ಬೈಂದೂರು ದಾಟಿ ಖಂಬದಕೋಣೆ ಬಳಿ ತಲುಪುವ ಸಂದರ್ಭ ಎ.ಸಿ.ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಹಿಳೆಯೊಬ್ಬರು ಇದನ್ನು ಕಂಡು ಎಲ್ಲರನ್ನೂ ಎಚ್ಚರಿಸಿದರು. ಕೂಡಲೇ ರೈಲ್ವೆ ಸಿಬ್ಬಂದಿ ಗಮನಕ್ಕೆ ತಂದು ರೈಲನ್ನು ಬೈಂದೂರು ತಾಲೂಕಿನ ಸೇನಾಪುರ ಮತ್ತು ಬಿಜೂರು ಗ್ರಾಮದ ಮಧ್ಯೆ ನಿಲ್ಲಿಸಿ ಬೆಂಕಿ ನಂದಿಸಲಾಯಿತು ಎನ್ನಲಾಗಿದೆ. ಎಲ್ಲ ಪ್ರಯಾಣಿಕರೂ ಕ್ಷೇಮವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖಾ ಮೂಲಗಳು ತಿಳಿಸಿವೆ.
“Ehsaas” – A Ghazal Concert at Mangalore (more…)